ಮಂಡ್ಯ: ಈ ಹಿಂದೆ ಮಿಮ್ಸ್‌ಗೆ ಆ್ಯಂಬುಲೆನ್ಸ್‌ಗಳ ಕೊರತೆಯಿದ್ದಿದ್ದರಿಂದಾಗಿ ರೋಗಿಗಳು ಸಮಸ್ಯೆ ಎದುರಿಸುತ್ತಿದ್ದರು. ತುರ್ತು ಪರಿಸ್ಥಿತಿಯಲ್ಲಿ ಖಾಸಗಿಯವರು ಕೇಳಿದಷ್ಟು ಹಣ ಕೊಟ್ಟು ಸೇವೆ ಪಡೆಯಬೇಕಾಗಿತ್ತು. ಆದರೆ, ಈ ಕುರಿತು ಈಟಿವಿ ಭಾರತ್ ಜನವರಿಯಲ್ಲಿ ವರದಿ ಪ್ರಸಾರ ಮಾಡಿತ್ತು. ಇದರ ಪರಿಣಾಮವಾಗಿ ಈಗ ಮಿಮ್ಸ್‌ಗೆ 5 ಹೊಸ ಆ್ಯಂಬುಲೆನ್ಸ್ ನೀಡಲಾಗಿದೆ.
ಸರ್ಕಾರವು 3 ಹೊಸ ಆ್ಯಂಬುಲೆನ್ಸ್ ನೀಡಿದರೆ, ಇಂಡಿಯನ್ ಆಯಿಲ್ ಕಂಪನಿಯವರು ಎರಡನ್ನು ಉಚಿತವಾಗಿ ಕೊಡುಗೆ ನೀಡಿದ್ದಾರೆ. ಅಪಘಾತವಾದ ಸಮಯದಲ್ಲಿ ಆ್ಯಂಬುಲೆನ್ಸ್ ಕೊರತೆಯಿಂದ ಸಮಸ್ಯೆಯಾಗುತ್ತಿತ್ತು. ಆದರೆ, ಈಗ ಆ ಸಮಸ್ಯೆ ದೂರವಾಗಿದೆ. ಖಾಸಗಿಯವರ ಮಾಫಿಯಕ್ಕೆ ಇದೀಗ ಬ್ರೇಕ್ ಬಿದ್ದಿದೆ. ಸಮರ್ಪಕವಾದ ಸಾಧನ- ಸಲಕರಣೆಗಳು ಇವುಗಳಲ್ಲಿದ್ದು, ಚಾಲಕರನ್ನೂ ನೇಮಕ ಮಾಡಿಕೊಳ್ಳಲಾಗಿದೆ.