ETV Bharat / state

ಮಂಡ್ಯದಲ್ಲೂ ಕೊರೊನಾ ಸ್ಫೋಟ: 935 ಮಂದಿಗೆ ಸೋಂಕು, 9 ಮಂದಿ ಬಲಿ - COVID report

ಮಂಡ್ಯ ಜಿಲ್ಲೆಯಲ್ಲಿ ಇಂದು 935 ಜನರಿಗೆ ಸೋಂಕು ತಗುಲಿದ್ದು, 9 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 28,175ಕ್ಕೆ ಏರಿಕೆಯಾಗಿದೆ.

ಮಂಡ್ಯದಲ್ಲಿ ಕೊರೊನಾ ಸ್ಪೋಟ
ಮಂಡ್ಯದಲ್ಲಿ ಕೊರೊನಾ ಸ್ಪೋಟ
author img

By

Published : Apr 28, 2021, 9:24 PM IST

ಮಂಡ್ಯ: ಜಿಲ್ಲೆಯಲ್ಲಿ ಕೊರೊನಾ ದಿನೆ ದಿನೇ ಸ್ಫೋಟಗೊಳ್ಳುತ್ತಿದ್ದು, ಇಂದು 935 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕಿತರ ಹೆಚ್ಚಳದಿಂದ ಜಿಲ್ಲಾಡಳಿತ ಕಂಗಾಲಾದರೂ ಸಹ ಕೋವಿಡ್ ಕಟ್ಟುನಿಟ್ಟಾದ ನಿಯಮ ಕೈಗೊಳ್ಳದೇ ಕೆಲವರು ನಿರ್ಲಕ್ಷ್ಯ ತೋರಿರುವುದು ದುರಂತವಾಗಿದೆ.

ಜಿಲ್ಲೆಯಲ್ಲಿಂದು ಸೋಂಕಿಗೆ 9 ಜನ ಬನ ಬಲಿಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 28,175 ಕ್ಕೆ ಏರಿಕೆಯಾಗಿದೆ. ವಿವಿಧ ಆಸ್ಪತ್ರೆಗಳಿಂದ 316 ಮಂದಿ ಗುಣಮುಖರಾಗಿದ್ದು, ಒಟ್ಟು ಈವರೆಗೆ 22,920 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಂತಾಗಿದೆ.

ಇಂದಿನ ಪ್ರಕರಣಗಳನ್ನು ಸೇರಿದಂತೆ ಸಕ್ರಿಯ ಪ್ರಕರಣಗಳ ಸಂಖ್ಯೆ 5,051 ಕ್ಕೆ ಏರಿಕೆಯಾಗಿದ್ದು, ಇಂದು 9 ಜನ ಕೊರೊನಾ ಮಹಾಮಾರಿಗೆ ಬಲಿ‌ಯಾಗಿದ್ದರೆ, ಸಾವಿನ ಸಂಖ್ಯೆ 202ಕ್ಕೆ ತಲುಪಿದೆ.

ತಾಲೂಕುವಾರು ವಿವರ:

ಮಂಡ್ಯ 460, ಮದ್ದೂರು 71, ಮಳವಳ್ಳಿ 58, ಪಾಂಡವಪುರ 34, ಶ್ರೀರಂಗಪಟ್ಟಣ 108, ಕೆ.ಆರ್. ಪೇಟೆ 117, ನಾಗಮಂಗಲ 81, ಹೊರ ಜಿಲ್ಲೆಯ 6 ಪ್ರಕರಣಗಳು ದಾಖಲಾಗಿವೆ.

ಇದನ್ನು ಓದಿ:ಬೆಂಗಳೂರಲ್ಲಿ ಬೆಡ್​​ ಸಿಗದೇ ಪರದಾಟ.. ರಸ್ತೆಯಲ್ಲೇ ಆ್ಯಂಬುಲೆನ್ಸ್ ನಿಲ್ಲಿಸಿ ಕೊರೊನಾ ಸೋಂಕಿತೆಗೆ ಚಿಕಿತ್ಸೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.