ಮಂಡ್ಯ: ಮಂಡ್ಯದಲ್ಲಿ ಕೊರೊನಾ ಅಬ್ಬರ ಹೆಚ್ಚಾಗಿದೆ. ಒಂದೇ ದಿನ ಜಿಲ್ಲೆಯಲ್ಲಿ 814 ಮಂದಿಗೆ ಸೋಂಕು ದೃಢಪಡುವ ಮೂಲಕ ದಾಖಲೆ ಮಾಡಿದೆ.
ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 21,813 ತಲುಪಿದ್ದು, ರವಿವಾರ 408 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ನಿನ್ನೆ 6 ಜನರು ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 3,573 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರಿದಿದೆ.
ಕೋವಿಡ್ ಪ್ರಕರಣಗಳು ಎಲ್ಲೆಲ್ಲಿ?
ಮಂಡ್ಯ 353, ಮದ್ದೂರು 55, ಮಳವಳ್ಳಿ 82, ಪಾಂಡವಪುರ 86, ಶ್ರೀರಂಗಪಟ್ಟಣ 52, ಕೆ.ಆರ್.ಪೇಟೆ 53, ನಾಗಮಂಗಲ ತಾಲೂಕಿನ 128, ಹೊರ ಜಿಲ್ಲೆಯ ಪ್ರಕರಣ 5 ದಾಖಲಾಗಿವೆ.