ETV Bharat / state

ಸಕ್ಕರೆ ಜಿಲ್ಲೆಗೂ ವಕ್ಕರಿಸಿದ ಕೊರೊನಾ: ಇಂದು ಮೂವರಲ್ಲಿ ಪಾಸಿಟಿವ್! - ಮಂಡ್ಯದಲ್ಲಿ ಕೊರೊನಾ ಪಾಸಿಟಿವ್​

ಕೊರೊನಾ ಪೀಡಿತ ಸಂಖ್ಯೆ134, 135, 136, 137 ಮತ್ತು 138 ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿದ್ದ ಹಿನ್ನೆಲೆ ಮಂಡ್ಯದ ಮೂವರಲ್ಲಿ ಕೊರೊನಾ ಪತ್ತೆಯಾಗಿದೆ.

mandya corona
ಕೊರೊನಾ
author img

By

Published : Apr 7, 2020, 1:34 PM IST

ಮಂಡ್ಯ: ನಿಜಾಮುದ್ದೀನ್ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದ ಕೊರೊನಾ ಸೋಂಕಿತ ಧರ್ಮಗುರುಗಳ ಜೊತೆ ಸಂಪರ್ಕ ಹೊಂದಿದ ಜಿಲ್ಲೆಯ ಮೂವರಿಗೆ ಕೊರೊನಾ ದೃಢಪಟ್ಟಿದೆ. ಮೂರೂ ಸೋಂಕಿತರಿಗೂ ಮಿಮ್ಸ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕೊರೊನಾ ಪೀಡಿತ ಸಂಖ್ಯೆ134, 135, 136, 137 ಮತ್ತು 138 ವ್ಯಕ್ತಿಗಳೊಂದಿಗೆ ಈ ಮೂವರು ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಕೊರೊನಾ ಪತ್ತೆಯಾಗಿದೆ. ಇವರು ರಾಜ್ಯದ 171, 172 ಮತ್ತು 173ನೇ ಸೋಂಕಿತರು. ಈ ಮೂವರೂ ಪುರುಷ ರೋಗಿಗಳು. ಇನ್ನೂ 7 ಮಂದಿಯ ವರದಿ ಬರಬೇಕಾಗಿದೆ.

ಧರ್ಮಗುರುಗಳ ಜೊತೆ ಒಟ್ಟು 10 ಮಂದಿ ಸಂಪರ್ಕ ಹೊಂದಿದ್ದು, ಇವರ ಜೊತೆಗೆ ಸಂಪರ್ಕ ಹೊಂದಿದ್ದ 48 ಮಂದಿಯನ್ನು ಐಸೊಲೇಷನ್ ವಾರ್ಡ್​ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೋವಿಡ್ 19 ಸೋಂಕಿತರು ಮಳವಳ್ಳಿ ಹಾಗೂ ನಾಗಮಂಗಲ ಪಟ್ಟಣ ನಿವಾಸಿಗಳಾಗಿದ್ದು, ಮಳವಳ್ಳಿ ಪಟ್ಟಣದ ಈದ್ಗಾ ಮೊಹಲ್ಲಾ ವಾರ್ಡ್ ಹಾಗೂ ನಾಗಮಂಗಲದ 14, 15 ಮತ್ತು 16ನೇ ವಾರ್ಡ್​ಗಳನ್ನು ಸಂಪೂರ್ಣವಾಗಿ ಲಾಕ್ ಡೌನ್ ಮಾಡಲಾಗಿದೆ. ಜನ ಸಂಚಾರಕ್ಕೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ಆದೇಶ ಹೊರಡಿಸಿದ್ದಾರೆ.

ಈ ಪ್ರದೇಶದಲ್ಲಿ 3 ಕಿಲೋ ಮೀಟರ್ ಸುತ್ತಳತೆಯನ್ನು ಕಂಟೈನ್​ಮೆಂಟ್ ಝೋನ್ ಎಂದು ಘೋಷಣೆ ಮಾಡಿದ್ದು, ಈ ನಿಷೇಧಿತ ಪ್ರದೇಶದ 5 ಕಿಲೋ ಮೀಟರ್ ಸುತ್ತಳತೆ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಣೆ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.