ಮಂಡ್ಯ: ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 200 ರ ಗಡಿ ದಾಟಿದೆ.
ಜಿಲ್ಲೆಯಲ್ಲಿ 211 ಹೊಸ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 21,284ಕ್ಕೆ ಏರಿಕೆಯಾಗಿದೆ. ನಿನ್ನೆ 66 ಮಂದಿ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಈವರೆಗೆ 20,332 ಮಂದಿ ಗುಣಮುಖವಾಗಿ ಡಿಸ್ಜಾರ್ಜ್ ಆಗಿದ್ದಾರೆ.
ಇನ್ನೂ ಸಕ್ರಿಯ ಪ್ರಕರಣಗಳ ಸಂಖ್ಯೆ 788 ಕ್ಕೆ ಏರಿಕೆಯಾಗಿದ್ದು, ಜಿಲ್ಲೆಯಲ್ಲಿ ಈವರೆಗೆ 164 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
211 ಮಂದಿಗೆ ಕೊರೊನಾ ಸೋಂಕು ಧೃಡ:
ಜಿಲ್ಲಾ ಸರ್ವೇಕ್ಷಣಾಧಿಕಾಗಳ ಮಾಹಿತಿ ಪ್ರಕಾರ ಮಂಡ್ಯ 65, ಮದ್ದೂರು 40, ಮಳವಳ್ಳಿ 23, ಪಾಂಡವಪುರ 12, ಶ್ರೀರಂಗಪಟ್ಟಣ 11, ಕೆ.ಆರ್.ಪೇಟೆ 15, ನಾಗಮಂಗಲ 36, ಹೊರ ಜಿಲ್ಲೆಯ 9 ಪ್ರಕರಣ ದಾಖಲಾಗಿವೆ.
66 ಮಂದಿ ಗುಣಮುಖ:
ಮಂಡ್ಯ 17, ಮದ್ದೂರು 21, ಮಳವಳ್ಳಿ 2, ಪಾಂಡವಪುರ 3, ಶ್ರೀರಂಗಪಟ್ಟಣ 5, ಕೆ.ಆರ್.ಪೇಟೆ 3, ನಾಗಮಂಗಲ 15 ಜನರು ಗುಣಮುಖರಾಗಿ ಡಿಸ್ಜಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.