ಕೊಪ್ಪಳ: ಅನಧಿಕೃತವಾಗಿ ಪಂಪ್ ಆಪರೇಟರ್ ನೇಮಕ ಮಾಡಿಕೊಂಡು ಹಣ ಗುಳುಂ ಮಾಡಿದ ಆರೋಪದ ಹಿನ್ನೆಲೆ ತಾಲೂಕಿನ ಹುಲಗಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಜ್ಜನರ್ ಪ್ರಕಾಶ್ ಅವರ 5 ವಾರ್ಷಿಕ ವೇತನ ಬಡ್ತಿಗಳನ್ನು ತಡೆಹಿಡಿದು ಜಿಲ್ಲಾ ಪಂಚಾಯತ್ ಸಿಇಒ ರಘುನಂದನ್ ಮೂರ್ತಿ ಆದೇಶ ಹೊರಡಿಸಿದ್ದಾರೆ.
ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಜಿಲ್ಲಾ ಪಂಚಾಯತ್ ಸಿಇಒ ರಘುನಂದನಮೂರ್ತಿ, ಹುಲಗಿ ಗ್ರಾಮ ಪಂಚಾಯತ್ನಲ್ಲಿ ಕೆ.ಎಂ.ಸೋಮಯ್ಯ ಎಂಬುವರನ್ನು ಅನಧಿಕೃತವಾಗಿ ಪಿಡಿಒ ಸಜ್ಜನರ್ ಪ್ರಕಾಶ್ ನೇಮಕಾತಿ ಮಾಡಿ, ಹಾಜರಿ ಪುಸ್ತಕದಲ್ಲಿ ಸಹಿ ಮಾಡಿಸಿಕೊಂಡು ಹಣ ಲಪಟಾಯಿಸಿದ್ದಾರೆ ಎಂಬ ದೂರು ದಾಖಲಾಗಿತ್ತು. ದೂರಿನ ಆಧಾರದಲ್ಲಿ ತಾಲೂಕು ಪಂಚಾಯತ್ ಇಒ ಪರಿಶೀಲನೆ ನಡೆಸಿದಾಗ ಆರೋಪ ಸಾಬೀತಾಗಿತ್ತು.
ಓದಿ : ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಗ್ರಾಮ ಲೆಕ್ಕಾಧಿಕಾರಿ
ಈ ಹಿನ್ನೆಲೆ ಪಂಪ್ ಆಪರೇಟರ್ಗೆ ಈವರೆಗೆ ಗ್ರಾಮ ಪಂಚಾಯತ್ನಿಂದ ಪಾವತಿಸಲಾಗಿರುವ ಎಲ್ಲಾ ಹಣವನ್ನು ಪಿಡಿಒ ಸಜ್ಜನರ್ ಪ್ರಕಾಶರಿಂದ ವಸೂಲು ಮಾಡಿ ಸರ್ಕಾರಕ್ಕೆ ಜಮಾ ಮಾಡುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ, ಐದು ವರ್ಷದ ವಾರ್ಷಿಕ ವೇತನ ಬಡ್ತಿಗಳನ್ನು ತಡೆಹಿಡಿಯಲಾಗಿದ್ದು, ಇಲಾಖೆ ವಿಚಾರಣೆಯನ್ನು ನಡೆಸಲಾಗುವುದು ಎಂದು ತಿಳಿಸಿದರು.