ಗಂಗಾವತಿ: ದುಷ್ಕರ್ಮಿಗಳ ತಂಡ ಯುವಕನನ್ನು ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಗಂಗಾವತಿ ತಾಲೂಕಿನ ಕಾರಟಗಿಯಲ್ಲಿ ನಡೆದಿದೆ. ಅಬ್ದುಲ್‌ನಜೀರ್ ಸಾಬ ಕಾಲೋನಿ ನಿವಾಸಿ ವೀರೇಶ (27) ಕೊಲೆಯಾಗಿದ್ದಾರೆ. ಹಲ್ಲೆಯಿಂದ ತೀವ್ರ ರಕ್ತಸ್ರಾವವಾಗಿ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಪಟ್ಟಣದ ಹೊಸ ಬಸ್ ನಿಲ್ದಾಣದ ಸಮೀಪ ಘಟನೆ ನಡೆದಿದೆ. ಆರೋಪಿಗಳು ಪರಾರಿಯಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಅಖಾಡದಲ್ಲಿ ಹೆಸರು ಮಾಡಿದ್ದ ವಿಲನ್ ವಿಧಿವಶ.. ಹೋರಿ ಸಾವಿಗೆ ಕಣ್ಣೀರಿಟ್ಟ ಕುಟುಂಬ