ETV Bharat / state

ಹೋಳಿಯಾಡಿ ಸ್ನಾನಕ್ಕೆಂದು ತೆರಳಿದ್ದ ಯುವಕ ಶವವಾಗಿ ಪತ್ತೆ - young man died

ಹೋಳಿಯಾಡಿದ ಬಳಿಕ ಸ್ನಾನಕ್ಕೆಂದು ತೆರಳಿದ್ದ ಯುವಕ ಕಾಲು ಜಾರಿ ಬಿದ್ದು ತುಂಗಭದ್ರಾ ನದಿ ಪಾಲಾದ ಘಟನೆ ದೇವಘಾಟದ ಬಳಿ ನಡೆದಿದೆ.

young man died after fell into river at Gangavathi
ಹೋಳಿಯಾಡಿ ಸ್ನಾನಕ್ಕೆಂದು ತೆರಳಿದ ಯುವಕ ಶವವಾಗಿ ಪತ್ತೆ!
author img

By

Published : Mar 30, 2021, 5:01 PM IST

ಗಂಗಾವತಿ: ಹೋಳಿಯಾಡಿದ ಬಳಿಕ ಸ್ನಾನಕ್ಕೆಂದು ತೆರಳಿದ್ದ ಯುವಕ ಕಾಲು ಜಾರಿ ಬಿದ್ದು ತುಂಗಭದ್ರಾ ನದಿ ಪಾಲಾದ ಘಟನೆ ನಡೆದಿದೆ. ಸತತ 8 ಗಂಟೆಗೂ ಹೆಚ್ಚು ಕಾಲ ಶೋಧದ ಬಳಿಕ ಇದೀಗ ಯುವಕ ಶವವಾಗಿ ಪತ್ತೆಯಾಗಿದ್ದಾನೆ.

ಹೋಳಿಯಾಡಿ ಸ್ನಾನಕ್ಕೆಂದು ತೆರಳಿದ ಯುವಕ ಶವವಾಗಿ ಪತ್ತೆ

ಗಾಂಧಿ ನಗರದ ಸತೀಶ್ (18) ಮೃತ ಯುವಕ. ಸೋಮವಾರ ಸ್ನೇಹಿತರೊಂದಿಗೆ ಹೋಳಿಯಾಡಿದ್ದ ಸತೀಶ್​ ಬಳಿಕ ಸ್ನಾನಕ್ಕೆಂದು ದೇವಘಾಟಕ್ಕೆ ತೆರಳಿದ್ದಾನೆ. ಆಗ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದಿದ್ದಾನೆ. ಈ ಯುವಕನೊಂದಿಗೆ ಮತ್ತೊಬ್ಬ ಯುವಕ ರಾಕೇಶ್​​ ಕೂಡ ಆಯತಪ್ಪಿ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದಾಗ ಸ್ಥಳೀಯರು ಆತನನ್ನು ರಕ್ಷಿಸಿದ್ದಾರೆ.

ಆದರೆ ದುರಾದೃಷ್ಟವಶಾತ್, ಸತೀಶ್​ನ ರಕ್ಷಣೆ ಸಾಧ್ಯವಾಗಲಿಲ್ಲ. ಹೀಗಾಗಿ ಈಜು ತಜ್ಞರ ಮೂಲಕ ಪೊಲೀಸರು ಶೋಧ ಕಾರ್ಯ ನಡೆಸಿದಾಗ ಶವ ಪತ್ತೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.