ಗಂಗಾವತಿ: ಲಾಕ್ಡೌನ್ ಬಳಿಕ ಉಂಟಾದ ನಿರುದ್ಯೋಗದಿಂದ ಬೀದಿಪಾಲಾದ ತಮ್ಮ ಕುಟುಂಬಕ್ಕೆ ಆರ್ಥಿಕ ನೆರವು ಒದಗಿಸುವುದು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ನಾನಾ ವಲಯದ ಶ್ರಮಿಕರು ಪ್ರತಿಭಟನೆ ನಡೆಸಿದರು.
ನಗರದಲ್ಲಿ ಸಿಐಟಿಯು ಸಂಘಟನೆ ನೇತೃತ್ವದಲ್ಲಿ ಇಲ್ಲಿನ ಎಪಿಎಂಸಿ ಮುಂದೆ ಧರಣಿ ನಡೆಸಿದ್ರು. ಪ್ರತಿಭಟನೆಯಲ್ಲಿ ಎಪಿಎಂಸಿ, ಗ್ರಾಮೀಣ ಬಜಾರ್, ಮಿಲ್, ಗೋದಾಮು, ವೇರ್ ಹೌಸ್ ಟ್ರಾನ್ಸ್ಪೋರ್ಟ್ ಸೇರಿದಂತೆ ನಾನಾ ವಲಯದಲ್ಲಿನ ಶ್ರಮಿಕರು ಪಾಲ್ಗೊಂಡಿದ್ದರು.
ಲಾಕ್ಡೌನ್ ಬಳಿಕ ತಮ್ಮ ಜೀವನ ದುಸ್ತರವಾಗಿದ್ದು, ಕುಟುಂಬ ನಿರ್ವಹಣೆಗೆ ಸಮಸ್ಯೆಯಾಗಿದೆ. ಈ ಹಿನ್ನೆಲೆ ಮಾಸಿಕ 7,500 ರೂ ನಂತೆ ಆರು ತಿಂಗಳ ಪರಿಹಾರ ನೀಡಬೇಕು , ಹಾಗೂ ವಸತಿ ಯೋಜನೆ ಕೂಡಲೆ ಅನುಷ್ಠಾನಕ್ಕೆ ತರಬೇಕು ಎಂಬ ಹತ್ತು ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.