ಗಂಗಾವತಿ(ಕೊಪ್ಪಳ): ರಾಜ್ಯದ ಎಪಿಎಂಸಿಗಳನ್ನು ಖಾಸಗೀಕರಣ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ತಾಲೂಕಿನ ಶ್ರೀರಾಮನಗರದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ನೂರಾರು ಶ್ರಮಿಕರು ಪ್ರತಿಭಟನೆ ನಡೆಸಿದರು.
![Workers protest in Gangavathi](https://etvbharatimages.akamaized.net/etvbharat/prod-images/7184576_780_7184576_1589384544457.png)
ಕಾಂಗ್ರೆಸ್ ಮುಖಂಡ ಹಾಗೂ ಗಂಗಾವತಿ ಎಪಿಎಂಸಿ ಸಮಿತಿಯ ನಿರ್ದೇಶಕ ರೆಡ್ಡಿ ಶ್ರೀನಿವಾಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಮಿಕರು ಸರ್ಕಾರದ ಈ ನಿರ್ಧಾರದಿಂದ ಲಕ್ಷಾಂತರ ಜನ ಶ್ರಮಿಕರಿಗೆ ತೊಂದರೆಯಾಗುತ್ತದೆ ಎಂದು ಆರೋಪಿಸಿದರು. ಈ ಬಗ್ಗೆ ಮಾತನಾಡಿದ ರೆಡ್ಡಿ ಶ್ರೀನಿವಾಸ್, ಸರ್ಕಾರ ಕೂಡಲೇ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯಬೇಕು, ಇಲ್ಲವಾದಲ್ಲಿ ಎಪಿಎಂಸಿಯನ್ನೇ ಅವಲಂಬಿಸಿದ ಲಕ್ಷಾಂತರ ರೈತರಿಗೆ ಅನ್ಯಾಯವಾಗಲಿದೆ. ಈ ಬಗ್ಗೆ ಕೂಡಲೇ ಸರ್ಕಾರ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.
![Workers protest in Gangavathi](https://etvbharatimages.akamaized.net/etvbharat/prod-images/7184576_426_7184576_1589384692031.png)
![Workers protest in Gangavathi](https://etvbharatimages.akamaized.net/etvbharat/prod-images/7184576_962_7184576_1589384622262.png)