ETV Bharat / state

ಗಂಗಾವತಿಯಲ್ಲಿ ನಡೆದ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ದುರಂತ; ಪೆಂಡಾಲ್​ ಕುಸಿದು ಮಹಿಳೆ ಸಾವು - ದೇವಸ್ಥಾನದಲ್ಲಿ ಅಡುಗೆ ಕೆಲಸ

ಸಾವನ್ನಪ್ಪಿರುವವರು ಹಾಗೂ ಗಾಯಗೊಂಡವರು ದೇವಸ್ಥಾನದಲ್ಲಿ ಅಡುಗೆ ಕೆಲಸಕ್ಕಾಗಿ ಬಂದಿದ್ದರು ಎನ್ನಲಾಗಿದೆ.

Woman dies at Srinivasa Kalyanotsava
ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ದುರಂತ- ಮಹಿಳೆ ಸಾವು
author img

By

Published : Jun 16, 2023, 7:52 PM IST

ಗಂಗಾವತಿ: ಲೋಕಕಲ್ಯಾಣಾರ್ಥ ಹಮ್ಮಿಕೊಳ್ಳಲಾಗಿದ್ದ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಪೆಂಡಾಲ್ ಕುಸಿದು ಬಿದ್ದು ಮಹಿಳೆಯೊಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿ, ಐವರು ಗಾಯಗೊಂಡ ಘಟನೆ ತಾಲ್ಲೂಕಿನ ಮುಸ್ಟೂರು ಕ್ಯಾಂಪಿನಲ್ಲಿ ನಡೆದಿದೆ. ಗ್ರಾಮದ ಶ್ರೀರಾಮದೇವರ ದೇವಸ್ಥಾನದಲ್ಲಿ ಕಳೆದ ಮೂರು ದಿನಗಳಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀನಿವಾಸ ಕಲ್ಯಾಣೋತ್ಸವದ ಸಮಾರೋಪ ದಿನವಾದ ಇಂದು (ಶುಕ್ರವಾರ) ಘಟನೆ ಸಂಭವಿಸಿದೆ. ಪ್ರಗತಿ ನಗರದ ಅಂಜಿನಮ್ಮ ಜಂಗಲೆಮ್ಮ (45) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಗಾಯಗೊಂಡವರನ್ನು ಮರಳಿ-ಪ್ರಗತಿನಗರದ ಶೃತಿ, ಶಾರದಾ, ಶಮೀದಾಬೀ, ದುರ್ಗಮ್ಮ ಹಾಗೂ ಬಸವರಾಜ ಎಂದು ಗುರುತಿಸಲಾಗಿದೆ. ಇವರೆಲ್ಲರೂ 27 ವರ್ಷದಿಂದ 45 ವರ್ಷದೊಳಗಿನವರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗಾಯಾಳುಗಳನ್ನು ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮುಸ್ಟೂರು ಕ್ಯಾಂಪ್ ಗ್ರಾಮದಲ್ಲಿ ನಡೆಯುತ್ತಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದ ಜನರಿಗೆ ಅಡುಗೆ ತಯಾರಿಸಿ ಬಡಿಸಲು ಇವರೆಲ್ಲರೂ ಬಂದಿದ್ದರು ಎನ್ನಲಾಗಿದೆ.

ರಾಮ ಮಂದಿರದ ಆವರಣದಲ್ಲಿ ಪೆಂಡಾಲ್ ಹಾಕಲಾಗಿತ್ತು. ಮಧ್ಯಾಹ್ನ ಬೀಸಿದ ಭಾರಿ ಪ್ರಮಾಣದ ಗಾಳಿಗೆ ಪೆಂಡಾಲ್ ಹರಿದು ಇವರ ಮೇಲೆ ಬಿದ್ದಿದ್ದೆ. ಪೆಂಡಾಲ್ ಬಿದ್ದ ರಭಸಕ್ಕೆ ಅಂಜಿನೆಮ್ಮ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಮಿಕ್ಕವರು ಗಾಯಗೊಂಡಿದ್ದಾರೆ.

ಪತ್ನಿ- ಮಾವನಿಗೆ ಚೂರಿಯಿಂದ ಇರಿದ ಅಳಿಯ: ಕೌಟುಂಬಿಕ ಕಲಹದ ಮುಂದುವರಿದ ಭಾಗವಾಗಿ ಪತ್ನಿ ಮತ್ತು ಮಾವನಿಗೆ ವ್ಯಕ್ತಿಯೊಬ್ಬ ಚೂರಿಯಿಂದ ಇರಿದ ಘಟನೆ ಬಂಟ್ವಾಳ ತಾಲೂಕಿನ ತುಂಬೆ ಸಮೀಪ ನಡೆದಿದೆ. ಕುಟುಂಬದ ಮನಸ್ತಾಪದ ವಿಚಾರಕ್ಕೆ ಸಂಬಂಧಿಸಿ ಪತ್ನಿ ಹಾಗೂ ಮಾವನಿಗೆ ಆರೋಪಿ ಪತಿ ಚೂರಿಯಿಂದ ಇರಿದು ಪರಾರಿಯಾದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತುಂಬೆ ಜಂಕ್ಷನ್​ನಲ್ಲಿ ನಡೆದಿದೆ.

ಜೂನ್ 15 ರಂದು ರಾತ್ರಿ 10.30ರ ಸುಮಾರಿಗೆ ತುಂಬೆ ನಿವಾಸಿಗಳಾದ ರಾಜೀವ ಹಾಗೂ ಅವರ ಪುತ್ರಿ ದಿವ್ಯ ಅವರು ಅಟೋ ರಿಕ್ಷಾದಲ್ಲಿ ಮನೆಯಿಂದ ಬಂಟ್ವಾಳ ಕಡೆಗೆ ಆಗಮಿಸುವ ವೇಳೆ ದಿವ್ಯಳ ಗಂಡ ಆರೋಪಿ ಕುಮಾರ ಆಟೋವನ್ನು ತುಂಬೆ ಜಂಕ್ಷನ್​ನಲ್ಲಿ ತಡೆದು, ಚೂರಿ ಹಿಡಿದುಕೊಂಡು ಬಂದು ಪತ್ನಿ ದಿವ್ಯಳಿಗೆ ಇರಿಯಲು ಯತ್ನಿಸಿದ್ದಾನೆ. ಈ ವೇಳೆ ಬಿಡಿಸಲು ಹೋದ ಮಾವ ರಾಜೀವ ಅವರಿಗೆ ಚೂರಿಯಿಂದ ಇರಿದಿದ್ದು, ಮೂವರ ಮಧ್ಯೆಯೂ ತಳ್ಳಾಟ ನಡೆದು ರಾಜೀವ ಹಾಗೂ ದಿವ್ಯ ಇಬ್ಬರು ಗಾಯಗೊಂಡು, ತಕ್ಷಣ ತುಂಬೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆಯ ಕುರಿತು ಆಟೋ ಚಾಲಕ ಯಶೋಧರ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೌಟುಂಬಿಕ ಮನಸ್ತಾಪದಿಂದಲೇ ಘಟನೆ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ: ಗಂಟಲಲ್ಲಿ ಆಹಾರ ಸಿಲುಕಿ ವಿಶೇಷ ಚೇತನ ಬಾಲಕ ಸಾವು; ಗಂಗಾವತಿಯಲ್ಲಿ ಘಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.