ಕೊಪ್ಪಳ: ಏಪ್ರಿಲ್ 10ರವರೆಗೆ ತುಂಗಭದ್ರಾ ಎಡದಂಡೆಯ ಮುಖ್ಯ ಕಾಲುವೆಗೆ ನೀರು ಹರಿಸುವ ಮೂಲಕ ರೈತರು ಬೆಳೆಯುವ 2ನೇ ಬೆಳೆಗೆ ನೀರು ನೀಡಲಾಗುವುದು ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದ್ದಾರೆ.
ಈ ಬಗ್ಗೆ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ 30ರವರೆಗೆ ನೀರು ಬಿಡುವ ಬಗ್ಗೆ ಐಸಿಸಿ ಸಭೆಯಲ್ಲಿಯೇ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆದರೆ, ಹೆಚ್ಚುವರಿ ನೀರು ಅಂದರೆ ಏಪ್ರಿಲ್ವರೆಗೂ ಬಿಡಬೇಕು ಎಂಬ ಆಗ್ರಹ ರೈತರಿಂದ ಕೇಳಿ ಬಂದಿತ್ತು. ಈ ಹಿನ್ನೆಲೆ ಹೆಚ್ಚುವರಿ ನೀರು ಬಿಡುವ ಬಗ್ಗೆ ಜನವರಿಯಲ್ಲಿ ಸಭೆ ಕರೆದು ಮೊತ್ತೊಮ್ಮೆ ಈ ಬಗ್ಗೆ ನಿರ್ಣಯ ಕೈಗೊಳ್ಳುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿತ್ತು.
ಆದರೆ, ಈಗ ಯಾವ ಕಾರಣಕ್ಕೂ ರೈತರು ಆತಂಕ ಪಡುವ ಅಗತ್ಯವಿಲ್ಲ. ಏಪ್ರಿಲ್ 10ರವರೆಗೆ ಖಚಿತವಾಗಿ ನೀರು ಬಿಡಲಾಗುವುದು ಎಂದರು.