ETV Bharat / state

ನೀರು, ಆಹಾರ ಅರಸಿ ಜಿಲ್ಲಾಡಳಿತ ಭವನಕ್ಕೆ ಬಂದ ಕೋತಿಗಳು

ಅರಣ್ಯ ಪ್ರದೇಶ, ಬೆಟ್ಟ-ಗುಡ್ಡಗಳ ನಡುವೆ ನೀರು ಸಿಗದ ಹಿನ್ನೆಲೆಯಲ್ಲಿ ಕೋತಿಗಳು ಜನ ವಸತಿ ಪ್ರದೇಶಗಳತ್ತ ಬರುತ್ತಿವೆ.

water problem
ಜಿಲ್ಲಾಡಳಿತ ಭವನಕ್ಕೆ ಬಂದ ಕೋತಿಗಳು
author img

By

Published : Apr 2, 2021, 7:13 PM IST

Updated : Apr 2, 2021, 7:36 PM IST

ಕೊಪ್ಪಳ: ರಣಬಿಸಿಲಿನಿಂದಾಗಿ ಅಡವಿಯಲ್ಲಿದ್ದ ಪ್ರಾಣಿ-ಪಕ್ಷಿಗಳು ಆಹಾರ, ನೀರು ಅರಸುತ್ತಾ ಜನವಸತಿ ಪ್ರದೇಶದ ಕಡೆ ಹೆಜ್ಜೆ ಹಾಕಿವೆ. ಜಿಲ್ಲಾಡಳಿತ ಭವನದ ಕಟ್ಟಡದ ಮುಂದೆ ಆಹಾರ, ನೀರಿಗಾಗಿ ಕೋತಿಗಳು ಕಾದು ಕುಳಿತ ದೃಶ್ಯ ಕಂಡುಬಂದಿತು.

ಕೊಪ್ಪಳ ಜಿಲ್ಲಾಡಳಿತ ಭವನಕ್ಕೆ ಬಂದ ಕೋತಿಗಳು

ಜಿಲ್ಲೆಯಾದ್ಯಂತ ತಾಪಮಾನದಲ್ಲಿ ಹೆಚ್ಚಳವಾಗಿದ್ದು ಬಿಸಿಲ ಬೇಗೆಗೆ ಜನ, ಪ್ರಾಣಿ, ಪಕ್ಷಿಗಳಿಗೆ ತೊಂದರೆಯಾಗಿದೆ. ಜಿಲ್ಲಾಡಳಿತ ಭವನದಲ್ಲಿ ಗಿಡಮರಗಳು ಇರುವುದರಿಂದ ಅಲ್ಲಿನ ವಾತಾವರಣ ತುಸು ತಂಪಾಗಿದೆ. ಹೀಗಾಗಿ ಕೋತಿಗಳು ಜಿಲ್ಲಾಡಳಿತ ಕಟ್ಟಡದ ಬಾಗಿಲಿಗೆ ಬಂದು ಬೀಡುಬಿಟ್ಟಿವೆ.

ಜಿಲ್ಲಾ ಪಂಚಾಯತ್​ ಸಿಬ್ಬಂದಿ ಪ್ರಕಾಶ ಹಿರೇಮಠ ಅವರು ಕೋತಿಗಳಿಗೆ ಆಹಾರ, ನೀರು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಜೊತೆಗೆ ಜಿಲ್ಲಾಡಳಿತ ಭವನಕ್ಕೆ ನಿತ್ಯವೂ ಜನರು ಬರುವುದರಿಂದ ತಮಗೆ ತಿನ್ನಲು ಏನಾದರೂ ಸಿಗುತ್ತದೆ ಎಂದು ಕಾದು ಕುಳಿತಿರುತ್ತವೆ.

Last Updated : Apr 2, 2021, 7:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.