ಗಂಗಾವತಿ: ಗ್ರಾಮ ವಾಸ್ತವ್ಯ ಮಾಡುವ ಮೂಲಕ ಆಯಾ ಗ್ರಾಮದ ಶೈಕ್ಷಣಿಕ ಸಮಸ್ಯೆ ಆಲಿಸುವ ಮತ್ತು ಸ್ಥಳದಲ್ಲಿಯೇ ಪರಿಹಾರ ದೊರಕಿಸಿ ಕೊಡುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಹಮ್ಮಿಕೊಂಡ ವಿನೂತನ ಕಾರ್ಯಕ್ರಮಕ್ಕೆ ಕಾರಟಗಿ ತಾಲ್ಲೂಕಿನ ಇಳಿಗೆನೂರು ಗ್ರಾಮದಲ್ಲಿ ಬಿಇಒ ಸೋಮಶೇಖರಗೌಡ ಚಾಲನೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಗಿನ ಪ್ರಾರ್ಥನೆ ಮುಗಿಯುತ್ತಿದ್ದಂತೆ, ನೆರೆದಿದ್ದ ಎಸ್ಡಿಎಂಸಿ ಆಡಳಿತ ಮಂಡಳಿ, ಗ್ರಾಮಸ್ಥರು, ಶಿಕ್ಷಣ ಪ್ರೇಮಿಗಳು ಹಾಗೂ ಚುನಾಯಿತರನ್ನು ಉದ್ದೇಶಿಸಿ ಮಾತನಾಡಿದರು.
ಕಲಿಕೆಯಲ್ಲಿ ಹಿಂದುಳಿದ ಪ್ರದೇಶ ಹಾಗೂ ಆಯಾ ಶಾಲೆಯ ಮಕ್ಕಳನ್ನು ಗುರುತಿಸಿ ವಿಶೇಷ ಒತ್ತು ನೀಡುವ ಮೂಲಕ ಮತ್ತೆ ಅಂತಹ ಮಕ್ಕಳನ್ನು ಶೈಕ್ಷಣಿಕವಾಗಿ ಗುಣಮಟ್ಟ ಹೆಚ್ಚಸುವ ಕಾರ್ಯ ಗ್ರಾಮ ವಾಸ್ತವ್ಯದಿಂದ ಮಾಡಲಾಗುತ್ತಿದೆ ಇದು ಯೋಜನೆಯ ಉದ್ದೇಶ ಎಂದರು.