ಕುಷ್ಟಗಿ (ಕೊಪ್ಪಳ): ಕೋವಿಡ್ ನಿಂದ ಶಾಲೆಗಳೆಲ್ಲ ಮುಚ್ಚಿದ್ದು, ಮಕ್ಕಳ ಕಲಿಕೆಗೆ ತೊಂದರೆಯಾಗುತ್ತಿದೆ. ಇದನ್ನು ಮನಗಂಡು ವಠಾರ ಶಾಲೆ ಶಿಕ್ಷಕರು ಮಕ್ಕಳಿಗೆ ಪಾಠ ಹೇಳಿಕೊಡಲು ಮುಂದಾಗಿದ್ದಾರೆ.
ಕುಷ್ಟಗಿ ಕೃಷ್ಣಗಿರಿ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ವಿದ್ಯಾಗಮ ವಠಾರ ಶಾಲೆ ಶಿಕ್ಷಕರು ತರಗತಿ ಪ್ರಾರಂಭಿಸಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿಕೊಂಡು ಮಕ್ಕಳಿಗೆ ತರಗತಿ ನಡೆಸುತ್ತಿದ್ದು, ಇದಕ್ಕೆ ಪಾಲಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ.