ಕುಷ್ಟಗಿ (ಕೊಪ್ಪಳ): ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿಗಳಿಗೆ ಕೊರೊನಾ ಸೋಂಕು ದೃಢವಾಗಿರುವ ಹಿನ್ನೆಲೆಯಲ್ಲಿ ಅವರು ಶೀಘ್ರವೇ ಗುಣಮುರಾಗುವಂತೆ ಪ್ರಾರ್ಥಿಸಿ ಪಟ್ಟಣದ ಶ್ರೀ ಮದ್ದಾನೇಶ್ವರ ಹಿರೇಮಠದಲ್ಲಿ ಶನಿವಾರ ಶ್ರೀ ಮದ್ದಾನೇಶ್ವರ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ ಸೇವೆ ಸಲ್ಲಿಸಲಾಯಿತು.
ಶ್ರೀ ಮಠದ ಕರಿಬಸವ ಶಿವಾಚಾರ್ಯ ಸ್ವಾಮೀಜಿಗಳ ಸಾನಿಧ್ಯದಲ್ಲಿ ಶ್ರೀ ಮದ್ದಾನೇಶ್ವರ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ ನೆರವೇರಿಸಿದರು. ನಂತರ ಮಾತನಾಡಿದ ಅವರು ಮಹಾಮಾರಿ ಕೊರೊನಾ ಯಾರನ್ನೂ ಬಿಟ್ಟಿಲ್ಲ, ಜಗದ್ಗುರುಗಳಿಗೆ ಕೊರೊನಾ ಸೋಂಕು ದೃಢವಾಗಿರುವುದು ಭಕ್ತರ ಮನಸ್ಸಿಗೆ ನೋವುಂಟಾಗಿದೆ, ಅವರು ಶೀಘ್ರವೇ ಗುಣಮುಖರಾಗಲು ಪ್ರಾರ್ಥಿಸಿರುವುದಾಗಿ ತಿಳಿಸಿದರು.