ಗಂಗಾವತಿ: ಕರ್ನಾಟಕ ರಾಜ್ಯೋತ್ಸವ ದಿನವನ್ನುಕರಾಳ ದಿನವನ್ನಾಗಿ ಆಚರಿಸಬೇಕು ಎಂದು ಕರೆ ಕೊಟ್ಟ ಮಾಜಿ ಸಚಿವ ಹೈ-ಕ(ಕಲ್ಯಾಣ ಕರ್ನಾಟಕ) ಹೋರಾಟ ಸಮಿತಿಯ ಮುಖ್ಯಪ್ರೇರಕ ವೈಜನಾಥ ಪಾಟೀಲ್ ಎದೆಗಾರಿಕೆ ಮೆಚ್ಚುವಂಥದ್ದು ಎಂದು ಹಿರಿಯ ಇತಿಹಾಸ ತಜ್ಞ ಡಾ. ಶರಣಬಸಪ್ಪ ಕೋಲ್ಕಾರ ಹೇಳಿದ್ದಾರೆ.
ಮಾಜಿ ಸಚಿವ ದಿವಂಗತ ವೈಜನಾಥ ಪಾಟೀಲ್ ಅವರ ಗೌರವಾರ್ಥ ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಹಮ್ಮಿಕೊಂಡಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದ ಕೋಲ್ಕಾರ, ಹೈ-ಕಕ್ಕೆ ಪ್ರತ್ಯೇಕ ರಾಜ್ಯದ ಮಾನ್ಯತೆ ಬೇಕೆಂದು ಹೋರಾಟಕ್ಕೆ ಕರೆ ನೀಡಿದ್ದರು.
ಅವರ ಉದ್ದೇಶ ನಿಜವಾಗಿಯೂ ಅಖಂಡ ಕರ್ನಾಟಕವನ್ನು ಒಡೆಯುವುದಾಗಿರಲಿಲ್ಲ. ದಶಕಗಳಿಂದಲೂ ಅಭಿವೃದ್ಧಿ ಕಾಣದ ಹೈ-ಕ ಭಾಗಕ್ಕೆ ಪ್ರತ್ಯೇಕ ರಾಜ್ಯದ ಕೂಗು ಎದ್ದರೆ ಕನಿಷ್ಠ ಪಕ್ಷ ವಿಶೇಷ ಸ್ಥಾನಮಾನವಾದರೂ ಸಿಗುತ್ತದೆ ಎಂಬ ಉದ್ದೇಶವಿತ್ತು ಅದು ಈಡೇರಿದೆ ಎಂದರು.