ETV Bharat / state

ಒತ್ತಡಕ್ಕೆ ಮಣಿದ ತಹಶೀಲ್ದಾರ್​: ಡಿಜೆ ಬಳಸಿಕೊಂಡು ಅದ್ಧೂರಿ ಮೆರವಣಿಗೆ ಮೂಲಕ ಗಣೇಶಮೂರ್ತಿ ನಿಮಜ್ಜನ - using DJ in koppal Ganesh murti nimajjanam

ಕೊಪ್ಪಳದ ಹಿಂದೂ ಮಹಾಮಂಡಳ ಪ್ರತಿಷ್ಠಾಪಿಸಿದ್ದ ಗಣೇಶಮೂರ್ತಿ ನಿಮಜ್ಜನ ಮೆರವಣಿಗೆಯಲ್ಲಿ ಸಾವಿರಾರು ಯುವಕರು ಡಿಜೆ ಶಬ್ದಕ್ಕೆ ಕುಣಿದು ಕುಪ್ಪಳಿಸಿದರು.

using DJ in koppal Ganesh murti nimajjanam
ಕೊಪ್ಪಳದಲ್ಲಿ ಅದ್ಧೂರಿ ಮೆರವಣಿಗೆ ಮೂಲಕ ಗಣೇಶಮೂರ್ತಿ ನಿಮಜ್ಜನ
author img

By

Published : Sep 20, 2021, 7:44 AM IST

ಕೊಪ್ಪಳ: ಗಣೇಶಮೂರ್ತಿ ನಿಮಜ್ಜನ ಮೆರವಣಿಗೆಯಲ್ಲಿ ಡಿಜೆ ಬಳಕೆ ವಿಷಯದಲ್ಲಿ ಹಿಂದೂ ಮಹಾಮಂಡಳದ ಕಾರ್ಯಕರ್ತರ ಕೈ ಮೇಲಾಗಿದ್ದು, ಡಿಜೆ ಬಳಸಿಕೊಂಡು ಅದ್ಧೂರಿ ಮೆರವಣಿಗೆ ಮೂಲಕ ಗಣಪತಿ ನಿಮಜ್ಜನ ಮಾಡಿದರು.

ನಗರದಲ್ಲಿ ಹಿಂದೂ ಮಹಾಮಂಡಳ ಪ್ರತಿಷ್ಠಾಪಿಸಿದ್ದ ಗಣೇಶಮೂರ್ತಿ ನಿಮಜ್ಜನ ಮೆರವಣಿಗೆಯಲ್ಲಿ ಡಿಜೆ ಬಳಸಲು ಮೊದಲು ಅನುಮತಿ ಸಿಗದ ಹಿನ್ನೆಲೆಯಲ್ಲಿ ಗಣೇಶ ಮೂರ್ತಿಯಿದ್ದ ಟ್ರ್ಯಾಕ್ಟರ್ ಅನ್ನು ನಿನ್ನೆ ರಾತ್ರಿ ರಸ್ತೆಯಲ್ಲೇ ನಿಲ್ಲಿಸಿದ್ದರು. ಡಿಜೆ ಬಳಕೆಗೆ ಅನುಮತಿ ನೀಡಿದರೆ ಮಾತ್ರ ಗಣೇಶ ಮೂರ್ತಿಯನ್ನು ಅಲ್ಲಿಂದ ತೆಗೆಯುವುದಾಗಿ ಪಟ್ಟು ಹಿಡಿದ ಕಾರ್ಯಕರ್ತರು, ಡಿಜೆ ಬಳಕೆಗೆ ಅನುಮತಿ ನೀಡುವಂತೆ ಒತ್ತಡ ಹಾಕಿದ್ದರು.

ಕೊಪ್ಪಳದ ಹಿಂದೂ ಮಹಾಮಂಡಳ ಪ್ರತಿಷ್ಠಾಪಿಸಿದ್ದ ಗಣೇಶಮೂರ್ತಿ ನಿಮಜ್ಜನ ಮೆರವಣಿಗೆ

ಕೊನೆಗೂ ಸಂಘಟಕರ ಒತ್ತಡಕ್ಕೆ ಮಣಿದ ಕೊಪ್ಪಳ ತಹಶೀಲ್ದಾರ್​ ಅಮರೇಶ ಬಿರಾದಾರ, ಡಿಜೆ ಬಳಕೆಗೆ ಅನುಮತಿ ನೀಡಿದರು. ಮೆರವಣಿಗೆಯಲ್ಲಿ ಸಾವಿರಾರು ಯುವಕರು ಭಾಗಿಯಾಗಿ ಡಿಜೆ ಶಬ್ದಕ್ಕೆ ಕುಣಿದು ಕುಪ್ಪಳಿಸಿದರು. ಈ ವೇಳೆ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ ದೃಶ್ಯ ಕಂಡು ಬಂದಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.