ETV Bharat / state

ರಸ್ತೆ ಅಪಘಾತ: ವಾಹನದ ಚಕ್ರಕ್ಕೆ‌ ಸಿಲುಕಿ ತಂದೆ ಮಗ ಸಾವು - ಗಂಗಾವತಿ ಅಪಘಾತ

ಬಸ್ ಹಾಗೂ ದ್ವಿಚಕ್ರ ವಾಹನದ ಮಧ್ಯೆ ಅಪಘಾತ ಸಂಭವಿಸಿ ತಂದೆ ಹಾಗೂ ಮಗ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.

accident
accident
author img

By

Published : Jan 18, 2021, 5:25 PM IST

ಗಂಗಾವತಿ (ಕೊಪ್ಪಳ): ಸಾರಿಗೆ ಸಂಸ್ಥೆಯ ವಾಹನದ ಚಕ್ರಕ್ಕೆ ಸಿಲುಕಿ ಸ್ಕೂಟರ್ ಸವಾರ ತಂದೆ ಹಾಗೂ ನಾಲ್ಕು ವರ್ಷದ ಮಗು ಸಾವನ್ನಪ್ಪಿದ ಘಟನೆ ತಾಲೂಕಿನ ಜಂಗಮರ ಕಲ್ಗುಡಿಯಲ್ಲಿ ಸಂಭವಿಸಿದೆ.

ಮೃತ ದುರ್ದೈವಿಗಳನ್ನು ಗಂಗಾವತಿಯ ಜಯನಗರದ ಕೂಲಿ‌ಕಾರ್ಮಿಕ ಹನುಮೇಶ ನಾಯಕ (27) ಹಾಗೂ ಪವನ್ (4) ಎಂದು ಗುರುತಿಸಲಾಗಿದೆ. ಮೃತಪಟ್ಟವರು ಕಲ್ಗುಡಿ ಗ್ರಾಮದಿಂದ ಗಂಗಾವತಿಗೆ ಬರುವ ಸಂದರ್ಭದಲ್ಲಿ ಗಂಗಾವತಿಯಿಂದ ಸಿಂಧನೂರು ಮಾರ್ಗದತ್ತ ಹೊರಟಿದ್ದ ಸಾರಿಗೆ ಸಂಸ್ಥೆಯ ವಾಹನದ‌ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಈ ಘಟ‌ನೆ ಸಂಭವಿಸಿದೆ.

ಕನಕಗಿರಿ ಶಾಸಕ ಬಸವರಾಜ ದಡೇಸೂಗೂರು, ಕಾರಟಗಿಯಿಂದ ಕೊಪ್ಪಳಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು ಕೂಡಲೇ ಸ್ಥಳಕ್ಕೆ ಧಾವಿಸಿದರು. ಪೊಲೀಸರು ಹಾಗೂ ಅಂಬುಲೆನ್ಸ್ ವಾಹನಕ್ಕೆ ಕರೆ‌ಮಾಡಿ ಸ್ಥಳಕ್ಕೆ ಕರೆಯಿಸಿಕೊಂಡು ಸಂಚಾರ ದಟ್ಟಣೆ‌ ನಿಯಂತ್ರಣ ನಿವಾರಣೆಗೆ ಯತ್ನಿಸಿದರು. ಬಳಿಕ‌ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.