ETV Bharat / state

ಕೊಪ್ಪಳದಲ್ಲಿ ಕೊರೊನಾ ಸೋಂಕಿಗೆ ಇಬ್ಬರು ಬಲಿ: 12ಕ್ಕೇರಿದ ಸಾವಿನ‌ ಸಂಖ್ಯೆ - ಕೊರೊನಾ ಸೋಂಕಿನಿಂದ ಇಬ್ಬರು ಸಾವು

ಕೊಪ್ಪಳದಲ್ಲಿ 60 ಹಾಗೂ 52 ವರ್ಷದ ಮಹಿಳೆಯರಿಬ್ಬರು ನಿನ್ನೆ ರಾತ್ರಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

Two deaths in Koppal due to corona infection
ಕೊಪ್ಪಳದಲ್ಲಿ ಕೊರೊನಾ ಸೋಂಕಿಗೆ ಇಬ್ಬರು ಬಲಿ..
author img

By

Published : Jul 19, 2020, 8:18 AM IST

ಕೊಪ್ಪಳ: ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮತ್ತಿಬ್ಬರು ಬಲಿಯಾಗಿದ್ದು, ಸಾವಿನ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.

60 ಹಾಗೂ 52 ವರ್ಷದ ಮಹಿಳೆಯರಿಬ್ಬರು ಶನಿವಾರ ರಾತ್ರಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಗಂಗಾವತಿ ತಾಲೂಕಿನ ಸಿದ್ದಾಪುರ ಗ್ರಾಮದ 60 ವರ್ಷದ ಮಹಿಳೆ ಉಸಿರಾಟದ ತೊಂದರೆಯಿಂದ ನಿನ್ನೆ ರಾತ್ರಿ ಆಸ್ಪತ್ರೆಗೆ ಬಂದಿದ್ದರು. ಆಸ್ಪತ್ರೆಗೆ ಬಂದ ಅರ್ಧ ಗಂಟೆಯೊಳಗೆ ಕೊನೆಯುಸಿರೆಳೆದಿದ್ದಾಳೆ. ರ‌್ಯಾಪಿಡ್ ಟೆಸ್ಟ್​ನಲ್ಲಿ ಮಹಿಳೆಯ ಕೊರೊನಾ ವರದಿ ಪಾಸಿಟಿವ್ ಬಂದಿದೆ. ಮೃತ ಮಹಿಳೆ ಸಕ್ಕರೆ ಖಾಯಿಲೆ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಳು ಎಂದು ತಿಳಿದು ಬಂದಿದೆ.

ಕೊಪ್ಪಳ ತಾಲೂಕಿನ ಮುನಿರಾಬಾದ್​ಗೆ ಬಂದಿದ್ದ ಆಂಧ್ರಪ್ರದೇಶದ ಕನೇಕಲ್ ಮೂಲದ 52 ವರ್ಷದ ಮಹಿಳೆ ಕೊರೊನಾ ಸೋಂಕಿಗೆ ಬಲಿಯಾಗಿದ್ದಾಳೆ. ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅಸುನೀಗಿದ್ದಾಳೆ. ಟ್ರೂನ್ಯಾಟ್​ನಲ್ಲಿ ಮಹಿಳೆಯ ಕೊರೊನಾ‌ ಸೋಂಕು ವರದಿ ಪಾಸಿಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.