ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಪೌರಾಣಿಕ ಸ್ಥಳ ಆಂಜನಾದ್ರಿ ಪರ್ವತದ ಮೇಲಿರುವ ಆಂಜನೇಯಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ ಮಾಡಲಾಗಿದ್ದು ಒಟ್ಟು 5,92,341 ರೂಪಾಯಿ ಸಂಗ್ರಹವಾಗಿದೆ. ಈ ವೇಳೆ ವಿದೇಶಿ ಕರೆನ್ಸಿ ಕೂಡಾ ಹೆಚ್ಚಿನ ಪ್ರಮಾಣದಲ್ಲಿ ಸಿಕ್ಕಿರುವುದು ಕುತೂಹಲ ಮೂಡಿಸಿದೆ.
ಹುಂಡಿಯಲ್ಲಿ ಇಂಗ್ಲೆಂಡ್, ಇಸ್ರೇಲ್, ನೇಪಾಳ ದೇಶಗಳ ಕರೆನ್ಸಿಗಳು ಸಿಕ್ಕಿವೆ. ದೇವಸ್ಥಾನದ ಸಿಬ್ಬಂದಿ ಮಂಜುನಾಥ ಹಿರೇಮಠ, ವೆಂಕಟೇಶ ಹಾಗೂ ಭಕ್ತರು ಹುಂಡಿ ಎಣಿಕೆ ವೇಳೆ ಹಾಜರಿದ್ದರು