ಕುಷ್ಟಗಿ(ಕೊಪ್ಪಳ): ಕುಷ್ಟಗಿ ಪಟ್ಟಣದ ಹೊರವಲಯದ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ - 50ರ ಅಗ್ನಿಶಾಮಕ ಡಿಪೋ ಬಳಿ, ಟ್ರ್ಯಾಕ್ಟರ್ ಒಂದು ಕ್ರಾಸಿಂಗ್ ಮಾಡುವಾಗ ಡಿವೈಡರ್ ಮೇಲೆ ಹತ್ತಿದ ಘಟನೆ ನಡೆದಿದೆ.
ಹೆದ್ದಾರಿ ಡಿವೈಡರ್ಗೆ ಬೈಕ್ ಹೋಗುವಷ್ಟು ಮಾತ್ರ ದಾರಿ ಮಾಡಿಕೊಡಲಾಗಿದೆ. ಈ ಹಿನ್ನೆಲೆಯಲ್ಲಿ ಅನೇಕ ಬಾರಿ ಈ ಸ್ಥಳದಲ್ಲಿ ಅಪಘಾತಗಳು ಸಂಭವಿಸಿವೆ. ಇನ್ನು ಈ ಭಾಗದಲ್ಲಿ ಯೂ ಟರ್ನ್ ನಿರ್ಮಿಸಬೇಕು ಎಂದು ಅನೇಕ ಬಾರಿ ವಾಹನ ಸವಾರರು ಮನವಿ ಮಾಡಿದ್ದಾರೆ. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ನಿನ್ನೆ ಟ್ರ್ಯಾಕ್ಟರ್ ಚಾಲಕ ಶಾರ್ಟ್ಕಟ್ ರೂಟ್ ತೆಗೆದುಕೊಳ್ಳಲು ಈ ದಾರಿಯನ್ನು ಬಳಸಿದ್ದಾನೆ. ಈ ವೇಳೆ, ಡಿವೈಡರ್ ಮೇಲೆ ಟ್ರ್ಯಾಕ್ಟರ್ ಹತ್ತಿದೆ. ಇನ್ನು ಘಟನೆಯ ವಿಡಿಯೋ ಮೊಬೈಲ್ನಲ್ಲಿ ಸೆರೆಯಾಗಿದೆ.