ETV Bharat / state

ಸಂಗಾಪುರ ಗ್ರಾಮದಲ್ಲಿ ಈ ಹಬ್ಬದ ಆಚರಣೆ ನಿಷೇಧಿಸಿ ತಹಸೀಲ್ದಾರ್ ಆದೇಶ - ಗಂಗಾವತಿ ಗ್ರಾಮೀಣ ಪೊಲೀಸರು

ಸಂಗಾಪುರ ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮೊಹರಂ ಹಬ್ಬ ನಿಷೇಧಗೊಳಿಸಿ ತಹಸೀಲ್ದಾರ್ ಆದೇಶ ಹೊರಡಿಸಿದ್ದಾರೆ.

Tehsildar order banning Muharram in Sangapur village
ಸಂಗಾಪುರ ಗ್ರಾಮದಲ್ಲಿ ಮೊಹರಂ ನಿಷೇಧಗೊಳಿಸಿ ತಹಸೀಲ್ದಾರ್ ಆದೇಶ
author img

By

Published : Jul 15, 2023, 11:02 PM IST

ಗಂಗಾವತಿ: ಸಂಗಾಪುರ ಗ್ರಾಮದಲ್ಲಿ ಈ ಹಿಂದೆ ಶಾಂತಿ ಕದಡುವ ಸಂಬಂಧಿಸಿದಂತ ಘಟನೆಗಳು ಜರುಗಿದ್ದು ಮತ್ತೆ ಸಮಾಜದಲ್ಲಿ ಶಾಂತಿ ಕದಡುವ ಸಾಧ್ಯತೆ ಇರುವ ಹಿನ್ನೆಲೆ ಜು.20ರಿಂದ 30ರ ವರೆಗೆ ಆಯೋಜಿಸಿದ್ದ ಮೊಹರಂ ಹಬ್ಬವನ್ನು ಗ್ರಾಮದಲ್ಲಿ ನಿಷೇಧಿಸಿ ಗಂಗಾವತಿ ತಾಲೂಕು ತಹಸೀಲ್ದಾರ್ ಮಂಜುನಾಥ ಹಿರೇಮಠ ಆದೇಶ ಹೊರಡಿಸಿದ್ದಾರೆ. ಮೊಹರಂ ಹಬ್ಬ ನಿಷೇಧ ಮಾತ್ರವಲ್ಲ, ಗಂಗಾವತಿ ಗ್ರಾಮೀಣ ಪೊಲೀಸರು ನೀಡಿದ ವರದಿ ಪರಿಶೀಲಿಸಿ ಗ್ರಾಮದಲ್ಲಿ ಹತ್ತು ದಿನಗಳ ಕಾಲ ಕಲಂ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ, ಆದೇಶ ಹೊರಡಿಸಿದ್ದಾರೆ.

ಸಂಗಾಪುರ ಗ್ರಾಮದಲ್ಲಿ ಈ ಹಿಂದೆ ಮೊಹರಂ ಹಬ್ಬದ ಸಂದರ್ಭದಲ್ಲಿ ಅಲಾಯಿ ಕುಣಿತದ ವಿಚಾರಕ್ಕೆ ಸಮುದಾಯಗಳ ಮಧ್ಯೆ ಮಾತಿನ ಚಕಮಕಿ ನಡೆದು ಅದು ಗ್ರಾಮದ ಶಾಂತಿ ಭಂಗಕ್ಕೆ ಕಾರಣವಾಗಿತ್ತು. ಅದು ಈಗಲೂ ಮುಂದುವರಿಯುವ ಸೂಚನೆ ಸಿಕ್ಕಿದ್ದು, ಸಣಪುಟ್ಟ ಜಗಳ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಗ್ರಾಮದಲ್ಲಿ ಸರ್ಕಾರಿ, ಸಾರ್ವಜನಿಕ ಆಸ್ತಿ-ಪಾಸ್ತಿಗೆ ನಷ್ಟವುಂಟಾಗುವುದನ್ನು ತಪ್ಪಿಸಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಕ್ರಮ ಕೈಗೊಳ್ಳಲು ಗ್ರಾಮೀಣ ಪೊಲೀಸರು ಸಲ್ಲಿಸಿದ ವರದಿ ಹಿನ್ನೆಲೆ ತಹಸೀಲ್ದಾರ್ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.

ಆದೇಶದಲ್ಲಿ ಜು.20 ರ ಸಂಜೆಯಿಂದ 30ರ ಬೆಳಗ್ಗೆ 8ಗಂಟೆ ವರೆಗೆ ಸಂಗಾಪುರ ಗ್ರಾಮದಲ್ಲಿ ಸಾರ್ವಜನಿಕರು ಹಲವು ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿ ತಹಸೀಲ್ದಾರ್ ಮಂಜುನಾಥ ಹತ್ತು ದಿನಗಳ ಕಾಲ ಕಲಂ 144 ಅನ್ವಯ ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.

ಕೊಪ್ಪಳದಲ್ಲಿ ಅಶ್ಲೀಲ ಗೋಡೆ ಬರಹ: ಎಚ್ಚರಿಕೆ ನೀಡಿದ ಎಸ್​ಪಿ - ಕೊಪ್ಪಳ: ಕೊಪ್ಪಳ ಜಿಲ್ಲೆ ಕನಕಗಿರಿ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದ ಪ್ರಾಥಮಿಕ ಶಾಲಾ ಗೋಡೆ ಮೇಲೆ ವಿದ್ಯಾರ್ಥಿನಿಯರ ಹೆಸರಿನಲ್ಲಿ ಕಿಡಿಗೇಡಿಗಳು ಅಶ್ಲೀಲ ಗೋಡೆ ಬರಹ ಬರದಿದ್ದು, ಉದ್ವಿಗ್ನತೆಗೆ ಕಾರಣವಾಗಿದೆ. ಈ ಹಿಂದೆ ಇದೇ ರೀತಿಯ ಕೆಲವು ವಿದ್ಯಾರ್ಥಿನಿಯರ ಹೆಸರು ಬರೆದಿದ್ದರು. ಈ ಕುರಿತು ಪೊಲೀಸ್ ಇಲಾಖೆಗೆ ದೂರು ನೀಡಲಾಗಿತ್ತು. ಆದರೂ ಮತ್ತೆ ಅದೇ ರೀತಿಯ ಘಟನೆ ಮುಂದುವರೆದಿದೆ.

ಶಾಲೆ ಶಿಕ್ಷಕಿ ಮಂಜುಳಾ ಅವರು ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ್ದು, ''ಶಾಲೆ ದೇವಾಲಯವಿದ್ದಂತೆ. ಆದರೆ, ಇಲ್ಲಿ ನಮ್ಮ ಕೆಲವು ವಿದ್ಯಾರ್ಥಿನಿಯರು ಶಾಲೆಗೆ ಬರದಂತೆ ಶಾಲೆಯ ಗೋಡೆ ಮೇಲೆ ಅಶ್ಲೀಲವಾಗಿ ಬರೆದು ಹಾಕುತ್ತಿದ್ದಾರೆ. ಇದು ಬಹಳ ಖಂಡನೀಯ. ಸರ್ಕಾರ ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಹೊತ್ತಿನಲ್ಲಿ ಇತರ ವ್ಯಕ್ತಿಗಳು ಈ ರೀತಿ ಗೋಡೆ ಮೇಲೆ ಬರೆದು ಹಾಕುತ್ತಿರುವುದರಿಂದ ಕೆಲವು ವಿದ್ಯಾರ್ಥಿನಿಯರು ಶಾಲೆಗೆ ಬರಲು ಅಂಜುತ್ತಿದ್ದಾರೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಕೂಡ ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟವರು ಕ್ರಮ ತೆಗೆದುಕೊಂಡು ವಿದ್ಯಾರ್ಥಿನಿಯರ ವಿದ್ಯಾರ್ಜನೆಗೆ ಅನುಕೂಲ ಮಾಡಿಕೊಡಬೇಕು'' ಎಂದು ಮನವಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂಓದಿ:ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ: ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಬಂಧನ, ಬಿಡುಗಡೆ

etv play button

ETV Bharat Logo

Copyright © 2025 Ushodaya Enterprises Pvt. Ltd., All Rights Reserved.