ETV Bharat / state

ಕುಷ್ಟಗಿಯಲ್ಲಿ ಶಾಲೆಗ ಅಪ್ಪಳಿಸಿದ ಸಿಡಿಲು: ಮೂವರಿಗೆ ಗಾಯ

author img

By

Published : Jul 17, 2022, 10:13 PM IST

ಮಳೆ ಬರುತ್ತಿದ್ದ ಹಿನ್ನೆಲೆ ಶಾಲೆಯಲ್ಲಿ ರಕ್ಷಣೆಗಾಗಿ ಕೆಲವರು ನಿಂತಿದ್ದರು. ಈ ವೇಳೆ ಶಾಲೆಗೆ ಸಿಡಿಲು ಬಡಿದಿದ್ದರಿಂದ ಮೂವರು ಗಾಯಗೊಂಡಿರುವ ಘಟನೆ ಕುಷ್ಟಗಿ ತಾಲೂಕಿನ ಕೊಡತಗೇರಾ ಗ್ರಾಮದಲ್ಲಿ ನಡೆದಿದೆ.

ಸಿಡಿಲು
ಸಿಡಿಲು

ಕುಷ್ಟಗಿ: ತಾಲೂಕಿನ ಕೊಡತಗೇರಾ ಗ್ರಾಮದಲ್ಲಿ ಸಿಡಿಲು ಶಾಲೆಗೆ ಅಪ್ಪಳಿಸಿದ್ದು, ಮಳೆಯಿಂದ ರಕ್ಷಣೆಗಾಗಿ ಶಾಲೆಯಲ್ಲಿ ಕುಳಿತವರಿಗೆ ಗಾಯಗಳಾಗಿವೆ. ಗುಡುಗು ಸಿಡಿಲು ಸಹಿತ ಮಳೆಯಾಗುತ್ತಿದ್ದು, ಈ ವೇಳೆ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಲವರು ನಿಂತಿದ್ದರು. ಕಲ್ಲಪ್ಪ ಮಂಗಳಪ್ಪ ಪೂಜಾರ, ಮಲ್ಲಪ್ಪ ಹೋಬಳಪ್ಪ ಗೌಡರ್, ಹನಮಪ್ಪ ಬಾಳಪ್ಪ ಪಿಳಿಬಂಟರ್ ಎಂಬುವವರು ಗಾಯಗೊಂಡಿದ್ದಾರೆ.

ಗಾಯಗೊಂಡ ವ್ಯಕ್ತಿಗಳು
ಗಾಯಗೊಂಡ ವ್ಯಕ್ತಿಗಳು

ಭಾನುವಾರ ಶಾಲೆಗೆ ರಜಾ ದಿನವಾಗಿದ್ದರಿಂದ ಮಕ್ಕಳಿಗೆ ಆಗಬಹುದಾದ ಅಪಾಯ ತಪ್ಪಿದಂತಾಗಿದೆ. ಹನುಮಸಾಗರ ಪಿಎಸ್​ಐ ಅಶೋಕ ಬೇವೂರು ಪ್ರತಿಕ್ರಿಯಿಸಿ, ಶಾಲೆಗೆ ಸಿಡಿಲು ಅಪ್ಪಳಿಸಿದ್ದು, ಒಂದಿಬ್ಬರಿಗೆ ಗಾಯವಾಗಿದ್ದು, ಯಾರಿಗೂ ಗಂಭೀರ ಪ್ರಮಾಣದ ಗಾಯ ಆಗಿಲ್ಲ. ಎಲ್ಲಾ ಅಪಾಯದಿಂದ ಪಾರಾಗಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ಸೆಲ್ಫಿ ಗೀಳು.. ನೀರಿನ ರಭಸಕ್ಕೆ ಕೊಚ್ಚಿಹೋದ ಕಲಘಟಗಿಯ ಯುವಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.