ETV Bharat / state

ಗಂಗಾವತಿಯಲ್ಲಿ ಕೋವಿಡ್ ಎರಡನೇ ಅಲೆ: ಮೂರು ಪ್ರಕರಣ ಪತ್ತೆ

ಗಂಗಾವತಿ‌ ನಗರದಲ್ಲಿ ಒಬ್ಬ ವಿದ್ಯಾರ್ಥಿ ಸೇರಿದಂತೆ ಮೂರು ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

corona
ಕೊರೊನಾ
author img

By

Published : Mar 23, 2021, 5:52 PM IST

ಗಂಗಾವತಿ: ಕೋವಿಡ್ ಎರಡನೇ ಅಲೆ ಎಲ್ಲೆಡೆ ವ್ಯಾಪಿಸುತ್ತಿರುವ ಆತಂಕದ ಮಧ್ಯೆ ಇದೇ ಮೊದಲ ಬಾರಿಗೆ ಗಂಗಾವತಿ‌ ನಗರದಲ್ಲಿ ಮೂರು ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

ಎರಡನೇ ಅಲೆ ರಾಜ್ಯದಲ್ಲಿ ಆರಂಭವಾದ ಬಳಿಕ ಕೊರೊನಾದ ಮೊದಲ ಪ್ರಕರಣ ಇದಾಗಿದ್ದು, ನಗರದ ಒಬ್ಬ ವಿದ್ಯಾರ್ಥಿ ಸೇರಿದಂತೆ ಮೂರು ಜನ ಪುರುಷರಲ್ಲಿ ಸೋಂಕು ದೃಢಪಟ್ಟಿದೆ. ಜಯನಗರದ 19 ವರ್ಷದ ವಿದ್ಯಾರ್ಥಿ, ಇದೇ ಜಯನಗರದಲ್ಲಿ ನಿವಾಸಿಸುತ್ತಿರುವ ತೋಟಗಾರಿಕಾ ಇಲಾಖೆಯ 35 ವರ್ಷದ ನೌಕರ ಹಾಗೂ ಶ್ರೀ ಇಂಟರ್ ನ್ಯಾಷನಲ್ ವಸತಿ ಗೃಹದಲ್ಲಿದ್ದ 40 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ಕೊಪ್ಪಳ ಜಿಲ್ಲೆಯಲ್ಲಿ ಇದುವರೆಗೂ ಒಟ್ಟು ಆರು ಪ್ರಕರಣ ಪತ್ತೆಯಾದಂತಾಗಿದೆ.

ನಗರಸಭೆಯ ಪೌರ ಆಯುಕ್ತ ಅರವಿಂದ ಜಮಖಂಡಿ ಹಾಗೂ ಆರೋಗ್ಯ ನಿರೀಕ್ಷಕರಾದ ಹೆಗಡೆ ಮತ್ತು ನಾಗರಾಜ್ ಸೋಂಕಿತರನ್ನು ಭೇಟಿಯಾಗಿ ಸ್ವಯಂ ಐಸೋಲೇಷನ್​ಗೆ ಒಳಗಾಗುವಂತೆ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ನೀಡುವ ಔಷಧೋಪಚಾರ ಪಡೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.