ETV Bharat / state

ಜಾತ್ರೆಗೂ ಮುನ್ನವೇ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನ.. ಏತಕ್ಕಾಗಿ ಗೊತ್ತೇ? - ಕೊಪ್ಪಳ ಜಿಲ್ಲೆಯ ಗಂಗಾವತಿ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕನಕಾಚಲ ದೇವರ ಜಾತ್ರೆಗೂ ಮುನ್ನವೇ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿ ಅಚ್ಚರಿ ಮೂಡಿಸಿದ್ದಾರೆ.

Thousands of people gather before the fair
ಜಾತ್ರೆಗೂ ಮುನ್ನವೇ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನ
author img

By

Published : Mar 6, 2020, 11:51 AM IST

ಗಂಗಾವತಿ: ತಾಲೂಕಿನ ಕನಕಗಿರಿಯಲ್ಲಿ ಇದೇ 16ರಂದು ಕನಕಾಚಲ ದೇವರ ಜಾತ್ರೆ ಹಾಗೂ ಮಹಾ ರಥೋತ್ಸವ ನಡೆಯಲಿದೆ. ಆದರೆ ಜಾತ್ರೆಗೂ ಮುನ್ನವೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಏಕಕಾಲಕ್ಕೆ ಸೇರಿ ಅಚ್ಚರಿ ಮೂಡಿಸಿದರು.

ಜಾತ್ರೆಗೂ ಮುನ್ನವೇ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನ

ಇಷ್ಟಕ್ಕೂ ಜಾತ್ರೆಗೂ ಮುನ್ನ ಏಕೆ ಕನಕಾಚಲ ದೈವ ಸನ್ನಿಧಾನದಲ್ಲಿ ಜನ ಸೇರಿದರು ಎಂಬ ಅನುಮಾನ ಸಹಜ. ಇತ್ತೀಚೆಗಷ್ಟೆ ಐತಿಹಾಸಿಕ ಹಿನ್ನೆಲೆ ಹೊಂದಿರುವ ಕನಕಾಚಲನ ದೇವರ ರಥೋತ್ಸವದ ಚಕ್ರಗಳು ಶತಮಾನಕ್ಕೂ ಹೆಚ್ಚು ಕಾಲ ಹಳೆಯದಾಗಿದ್ದವು. ಈ ಹಿನ್ನೆಲೆ ಕೊಟ್ಟೂರಿನ ರಥಶಿಲ್ಪಿಗಳ ಬಳಿ ನೂತನವಾಗಿ ಚಕ್ರಗಳನ್ನು ಮಾಡಿಸಲಾಗಿತ್ತು, ಈ ಹಿನ್ನೆಲೆ ಹೊಸದಾಗಿ ಮಾಡಿಸಿದ್ದ ರಥದ ಚಕ್ರಗಳನ್ನು ಅದ್ಧೂರಿ ಮೆರವಣಿಗೆ ಮೂಲಕ ದೈವ ಸನ್ನಿಧಿಯ ಪ್ರಾಂಗಣಕ್ಕೆ ತರಲಾಯಿತು.

ಬಳಿಕ ಕ್ರೇನ್​​ಗಳ ಸಹಾಯದಿಂದ ಗಾಲಿಗಳ ಅಚ್ಚಿನ ಹಲಗೆಯ ಮೇಲೆ ರಥದ ಚೌಕಟ್ಟು ಕೂಡಿಸಲಾಯಿತು. ಸುಮಾರು ಎರಡು ಗಂಟೆ ಬಳಿಕ ಚಕ್ರಗಳ ಮೇಲೆ ರಥ ಕೂಡಿಸುವ ಕಾರ್ಯ ಮುಗಿಯಿತು. ಕ್ರೇನ್​​ಗಳ ಸಹಾಯದಿಂದ ಗಾಲಿಗಳ ಅಚ್ಚಿನ ಹಲಗೆಯ ಮೇಲೆ ರಥದ ಚೌಕಟ್ಟನ್ನು ಕೂಡಿಸಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.