ETV Bharat / state

ರೈತ ಡ್ರಾ ಮಾಡಿದ ‌ಸಾಲದ ಮೊತ್ತವನ್ನು ಕೆಲವೇ ಕ್ಷಣದಲ್ಲಿ ಎಗರಿಸಿದ ಚಾಲಕಿ ಕಳ್ಳರು!

author img

By

Published : Feb 18, 2021, 5:36 PM IST

ಬ್ಯಾಂಕ್​ನಲ್ಲಿ 3 ಲಕ್ಷದ 6 ಸಾವಿರ ರೂ. ಡ್ರಾ ಮಾಡಿದ್ದ ರೈತ 50 ಸಾವಿರ ರೂ. ಕಿಸೆಯಲ್ಲಿರಿಸಿ, ಇನ್ನೂ 2.56 ಲಕ್ಷ ರೂಪಾಯಿಯನ್ನು ಸ್ಕೂಟಿಯಲ್ಲಿರಿಸಿ ಪಕ್ಕದ ಹೋಟೆಲ್​ಗೆ ಚಹಾ ಸೇವನೆಗೆ ಹೋಗಿದ್ದ. ಚಹಾ ಸೇವನೆಗೆ ಹೋಗಿ ಬರುವಷ್ಟರಲ್ಲಿ ಹಣ ಕಾಣೆಯಾಗಿರುವುದು ಕಂಡು ಬಂದಿದೆ.

ಕುಷ್ಟಗಿ (ಕೊಪ್ಪಳ): ಕುಷ್ಟಗಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್​ನಿಂದ ಡ್ರಾ ಮಾಡಿದ್ದ 2.56 ಲಕ್ಷ ರೂ. ರೈತರೊಬ್ಬರ ಸಾಲದ ಹಣವನ್ನು ಖದೀಮರು ಎಗರಿಸಿದ ಘಟನೆ ನಡೆದಿದೆ.

ಕುಷ್ಟಗಿ ಬ್ಯಾಂಕ್​ನಲ್ಲಿ ಸಾಲಗಾರ ರೈತ ದೊಡ್ಡಬಸಯ್ಯ ಹಿರೇಮಠ ಅವರಿಗೆ 3.6 ಲಕ್ಷ ರೂ. ಮೊತ್ತದ ಸಾಲದ ಚೆಕ್ ನೀಡಲಾಗಿತ್ತು. ಸದರಿ ಮೊತ್ತವನ್ನು ಕರ್ನಾಟಕ ಗ್ರಾಮೀಣ ಬ್ಯಾಂಕ್​ನಿಂದ ಡ್ರಾ ಮಾಡಿಸಿಕೊಡಲು ಬ್ಯಾಂಕ್​ನ ಸಿಬ್ಬಂದಿ ಗೌಸುಸಾಬ್ ಮುಲ್ಲಾ ಅವರೊಟ್ಟಿಗೆ ಕಳುಹಿಸಲಾಗಿತ್ತು.

ಸಾಲದ ಹಣ ಕದ್ದ ಕಳ್ಳರು

ಬ್ಯಾಂಕ್​ನಲ್ಲಿ 3 ಲಕ್ಷದ 6 ಸಾವಿರ ರೂ. ಡ್ರಾ ಮಾಡಿದ್ದರು. 50 ಸಾವಿರ ರೂ. ಕಿಸೆಯಲ್ಲಿರಿಸಿ, ಇನ್ನೂ 2.56 ಲಕ್ಷ ರೂಪಾಯಿಯನ್ನು ಸ್ಕೂಟಿಯಲ್ಲಿರಿಸಿ ಪಕ್ಕದ ಚಂದ್ರಶೇಖರ ಹೋಟೆಲ್​ಗೆ ಚಹಾ ಸೇವನೆಗೆ ಹೋಗಿದ್ದರು. ಚಹಾ ಸೇವನೆಗೆ ಹೋಗಿ ಬರುವಷ್ಟರಲ್ಲಿ ಹಣ ಕಾಣೆಯಾಗಿರುವುದು ಕಂಡು ಬಂದಿದೆ.

ರೈತ ದೊಡ್ಡಬಸಯ್ಯ ಹಿರೇಮಠ ಜೋರಾಗಿ ಅಳಲಾರಂಭಿಸಿದಾಗ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಕೂಡಲೇ ದೌಡಾಯಿಸಿದ ಪಿಎಸ್​ಐ ತಿಮ್ಮಣ್ಣ ನಾಯಕ್, ಕರ್ನಾಟಕ ಗ್ರಾಮೀಣ ಬ್ಯಾಂಕ್, ಪವನ್ ಇಲೆಕ್ಟ್ರಿಕಲ್, ಚಂದ್ರಶೇಖರ ಹೋಟಲ್ ಸಿಸಿಟಿವಿ ಪರಿಶೀಲಿದರು.

ಪವನ್ ಎಲೆಕ್ಟ್ರಿಕಲ್ ಸಿಸಿಟಿವಿಯಲ್ಲಿ ಮೂವರು ಯುವಕರು, ಸ್ಕೂಟಿಯಿಂದ ಹಣ ಎಗರಿಸಿ ಹೋಗುವ ದೃಶ್ಯಾವಳಿಗಳು ಲಭ್ಯವಾಗಿದ್ದು, ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.

ಫೆ. 11ರಂದು ಕಂದಕೂರ ಜ್ಯವೆಲ್ಲರ್ಸ್​ನಲ್ಲಿ ಅಭರಣ ಕಳುವಾಗಿ ಒಂದು ವಾರದ ಬಳಿಕ ಇದೀಗ ರೈತನ ಸಾಲದ ಹಣ ಕಳುವಾಗಿದೆ. ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.