ಕೊಪ್ಪಳ : ನಗರದಲ್ಲಿ ಇಂದಿನಿಂದ ಜುಲೈ 25ರವರೆಗೆ ಮಧ್ಯಾಹ್ನ 2 ಗಂಟೆಯ ನಂತರ ಸ್ವಯಂ ಪ್ರೇರಿತವಾಗಿ ಬಂದ್ ಮಾಡುವ ನಿರ್ಧಾರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.
ಮಧ್ಯಾಹ್ನ 3 ಗಂಟೆಯಾದ್ರೂ ನಗರದ ಬಹುಪಾಲು ಅಂಗಡಿ ಮಳಿಗೆಗಳು ಯಥಾ ರೀತಿ ಓಪನ್ ಆಗಿದ್ದವು. ಕೆಲವರು ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ್ರೆ ಇನ್ನು ಕೆಲವರು ಅಂಗಡಿಗಳನ್ನು ಎಂದಿನಂತೆ ಓಪನ್ ಮಾಡಿಕೊಂಡಿದ್ದರು.
ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆ ನಿನ್ನೆ ವಿವಿಧ ವರ್ತಕರ ಸಂಘದ ಮುಖಂಡರು ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಅವರ ಸಮ್ಮುಖದಲ್ಲಿ ಸಭೆ ನಡೆಸಿ, ಜುಲೈ 8 ರಿಂದ 25 ರವರೆಗೆ ಮಧ್ಯಾಹ್ನ 2 ಗಂಟೆಗೆ ಅಂಗಡಿಗಳನ್ನು ಬಂದ್ ಮಾಡುವುದಾಗಿ ಹೇಳಿದ್ದರು. ಆದರೆ, ಆ ನಿರ್ಧಾರ ಕೇವಲ ಘೋಷಣೆ ಮಾತ್ರವಾಯ್ತು ಎನ್ನುವಂತೆ ವಾತಾವರಣ ನಿರ್ಮಾಣವಾಗಿತ್ತು.
ಜನರ ಹಾಗೂ ವಾಹನಗಳ ಓಡಾಟ ಎಂದಿನಂತೆ ಇರುವುದು ಕಂಡು ಬಂದಿತು. ಕುಷ್ಟಗಿ ಪಟ್ಟಣದಲ್ಲೂ ಸಹ ಮಧ್ಯಾಹ್ನ 3 ಗಂಟೆಯ ವೇಳೆಗೆ ಬಹುತೇಕ ಅಂಗಡಿಗಳು ಬಂದ್ ಆಗಿದ್ದವು. ಬೆರಳೆಣಿಕೆಯಷ್ಟು ಅಂಗಡಿಗಳು ಮಾತ್ರ ಓಪನ್ ಆಗಿರುವುದು ಕಂಡು ಬಂತು.