ಗಂಗಾವತಿ: ಇಂದಿನ ಕಾಲದಲ್ಲಿ ಮಹಿಳೆಯರು ಒಂದು ಮಗುವನ್ನು ಹೆರುವುದೇ ಕಷ್ಟ ಅಂತಾರೆ. ಅವಳಿ ಮಕ್ಕಳಾದರೆ ಇನ್ನೂ ಕಷ್ಟ. ಆದರೆ ನಗರದ ಮಹಿಳೆಯೊಬ್ಬರು ಏಕಕಾಲಕ್ಕೆ ಬರೋಬ್ಬರಿ ಮೂರು ಮಕ್ಕಳಿಗೆ ಜನ್ಮ ನೀಡುವ ಮೂಲಕ ಗಮನ ಸೆಳೆದಿದ್ದಾರೆ.
ಇಲ್ಲಿನ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ, ನೀಲಮ್ಮ ದುರುಗೇಶ ಎಂಬ 23 ವರ್ಷ ವಯಸ್ಸಿನ ಮಹಿಳೆ ಮೊದಲ ಹೆರಿಗೆಯಲ್ಲಿ ಮೂರು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಎರಡು ಗಂಡು ಹಾಗೂ ಒಂದು ಹೆಣ್ಣು ಮಗು ಜನಿಸಿವೆ. ಇದೀಗ ನವಜಾತ ಶಿಶುಗಳು ಮತ್ತು ತಾಯಿ ಆರೋಗ್ಯವಾಗಿದ್ದಾರೆ. ಆದರೆ, ಶಿಶುಗಳ ತೂಕ ಕಡಿಮೆ ಇರುವುದರಿಂದ ಖಾಸಗಿ ಆಸ್ಪತ್ರೆಯ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತದೆ.