ETV Bharat / state

ಆಸ್ಪತ್ರೆ ಹೊರಗೆ ಮಲಗಿದ್ದ ರೋಗಿ: ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡ ಸಚಿವ ಬಿ.ಸಿ.ಪಾಟೀಲ್

ಜಿಲ್ಲಾಸ್ಪತ್ರೆ ಕಟ್ಟಡದ ಹಿಂಭಾಗದಲ್ಲಿರುವ ಎಎನ್ಎಂ ಸೆಂಟರ್ ಮುಂಭಾಗದಲ್ಲಿ ರೋಗಿಯೊಬ್ಬ ಮಲಗಿದ್ದ. ಇದನ್ನು ಕಂಡ ಸಚಿವ ಪಾಟೀಲ್, ರೋಗಿಯನ್ನು ಒಳಗೆ ಕಳಿಸಿ ಚಿಕಿತ್ಸೆ ಕೊಡೋಕೆ ಆಗಲ್ಲವೆ? ಏನಿದು ಅವ್ಯವಸ್ಥೆ? ಸ್ವಲ್ಪನಾದ್ರೂ ಮಾನವೀಯತೆ ಬೇಡವಾ ಎಂದು ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡರು.

ಸಚಿವ ಬಿ.ಸಿ.ಪಾಟೀಲ್
ಸಚಿವ ಬಿ.ಸಿ.ಪಾಟೀಲ್
author img

By

Published : Apr 29, 2021, 2:25 PM IST

ಕೊಪ್ಪಳ: ರೋಗಿಯೊಬ್ಬ ಆಸ್ಪತ್ರೆಯ ಹೊರಗಡೆ ಮಲಗಿದ್ದನ್ನು ಕಂಡು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಅಧಿಕಾರಿಗಳ ಮೇಲೆ ಸಿಡಿಮಿಡಿಗೊಂಡ ಘಟನೆ ನಡೆಯಿತು.

ನಗರಕ್ಕೆ ಆಗಮಿಸಿದ್ದ ಸಚಿವ ಬಿ.ಸಿ.ಪಾಟೀಲ್ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆ ಕಟ್ಟಡದ ಹಿಂಭಾಗದಲ್ಲಿರುವ ಎಎನ್ಎಂ ಸೆಂಟರ್ ಮುಂಭಾಗದಲ್ಲಿ ರೋಗಿಯೊಬ್ಬ ಮಲಗಿದ್ದ. ಇದನ್ನು ಕಂಡ ಸಚಿವ ಪಾಟೀಲ್, ರೋಗಿಯನ್ನು ಒಳಗೆ ಕಳಿಸಿ ಚಿಕಿತ್ಸೆ ಕೊಡೋಕೆ ಆಗಲ್ಲವೆ? ಏನಿದು ಅವ್ಯವಸ್ಥೆ? ಸ್ವಲ್ಪನಾದ್ರೂ ಮಾನವೀಯತೆ ಬೇಡವಾ ಎಂದು ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡರು.

ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡ ಸಚಿವ ಬಿ.ಸಿ.ಪಾಟೀಲ್

ತಕ್ಷಣವೇ ಜಿಲ್ಲಾಸ್ಪತ್ರೆಯ ಅಧಿಕಾರಿಗಳು ಸಿಬ್ಬಂದಿಯನ್ನು ಕರೆಸಿ ಆ ರೋಗಿಯನ್ನು ಒಳಗೆ ಕಳಿಸಿದರು. ಸಂಸದ ಸಂಗಣ್ಣ ಕರಡಿ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.