ETV Bharat / state

ಜೀರ್ಣೊದ್ಧಾರದ ನೆಪದಲ್ಲಿ ಮೂಲ ವಿಗ್ರಹ ಸ್ಥಳಾಂತರ: ಸ್ಥಳೀಯರ ಆಕ್ರೋಶ - ಆನೆಗೊಂದಿ ಸಮೀಪದ ಪಂಪಾಸರೋವರದಲ್ಲಿನ ಪ್ರಾಚೀನ ಕಾಲದ ಜಯಲಕ್ಷ್ಮಿ ದೇಗುಲ

ಸಾರಿಗೆ ಸಚಿವ ಬಿ. ಶ್ರೀರಾಮುಲು ವೈಯಕ್ತಿಕ ಆಸಕ್ತಿಯಿಂದ ಈ ಕೆಲಸ ಕೈಗೊಂಡಿದ್ದಾರೆ. ಆರಂಭದಲ್ಲಿ ದೇಗುಲದ ಹೊರಭಾಗದಲ್ಲಿನ ಹಳೆಯ ಕಾಲದ ಕಟ್ಟಡದ ಅವಶೇಷಗಳನ್ನು ತೆರವು ಮಾಡಿ ಅದೇ ಶೈಲಿಯಲ್ಲಿ ಪುನರ್ ನಿರ್ಮಾಣ ಮಾಡುವ ಕಾರ್ಯ ನಡೆದಿತ್ತು. ಆದರೆ, ಗುರುವಾರ ರಾತ್ರಿ ಇದ್ದಕ್ಕಿದ್ದಂತೆ ಪ್ರಾಚೀನ ಕಾಲದಲ್ಲಿ ಪ್ರತಿಷ್ಠಾಪನೆ ಮಾಡಲಾಗಿತ್ತು ಎಂದು ಹೇಳಲಾಗುತ್ತಿರುವ ಜಯಲಕ್ಷ್ಮಿಯ ಮೂಲ ವಿಗ್ರಹವನ್ನು ಕಾಮಗಾರಿ ಮಾಡುತ್ತಿರುವ ವ್ಯಕ್ತಿಗಳು ತೆಗೆದು ಗೋಣಿಚೀಲದಲ್ಲಿಟ್ಟಿದ್ದಾರೆ ಎಂಬ ಮಾಹಿತಿ ಹರಡಿದೆ.

ಜೀರ್ಣೊದ್ಧಾರದ ನೆಪದಲ್ಲಿ ಮೂಲ ವಿಗ್ರಹ ಸ್ಥಳಾಂತರಕ್ಕೆ ಸ್ಥಳೀಯರ ಆಕ್ರೋಶ

author img

By

Published : May 27, 2022, 8:08 PM IST

Updated : May 27, 2022, 8:25 PM IST

ಗಂಗಾವತಿ: ದೇಗುಲದ ಅಭಿವೃದ್ಧಿಯ ನೆಪದಲ್ಲಿ ತಾಲೂಕಿನ ಆನೆಗೊಂದಿ ಸಮೀಪದ ಪಂಪಾಸರೋವರದಲ್ಲಿನ ಪ್ರಾಚೀನ ಕಾಲದ ಜಯಲಕ್ಷ್ಮಿ ದೇಗುಲವನ್ನು ರಾತ್ರೋರಾತ್ರಿ ಸ್ಥಳಾಂತರ ಮಾಡಿರುವ ಘಟನೆ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ನೂರಾರು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಸಾರಿಗೆ ಸಚಿವ ಬಿ. ಶ್ರೀರಾಮುಲು ವೈಯಕ್ತಿಕ ಆಸಕ್ತಿಯಿಂದ ಈ ಕೆಲಸ ಕೈಗೊಂಡಿದ್ದಾರೆ. ಆರಂಭದಲ್ಲಿ ದೇಗುಲದ ಹೊರಭಾಗದಲ್ಲಿನ ಹಳೆಯ ಕಾಲದ ಕಟ್ಟಡದ ಅವಶೇಷಗಳನ್ನು ತೆರವು ಮಾಡಿ ಅದೇ ಶೈಲಿಯಲ್ಲಿ ಪುನರ್ ನಿರ್ಮಾಣ ಮಾಡುವ ಕಾರ್ಯ ನಡೆದಿತ್ತು. ಆದರೆ, ಗುರುವಾರ ರಾತ್ರಿ ಇದ್ದಕ್ಕಿದ್ದಂತೆ ಪ್ರಾಚೀನ ಕಾಲದಲ್ಲಿ ಪ್ರತಿಷ್ಠಾಪನೆ ಮಾಡಲಾಗಿತ್ತು ಎಂದು ಹೇಳಲಾಗುತ್ತಿರುವ ಜಯಲಕ್ಷ್ಮಿಯ ಮೂಲ ವಿಗ್ರಹವನ್ನು ಕಾಮಗಾರಿ ಮಾಡುತ್ತಿರುವ ವ್ಯಕ್ತಿಗಳು ತೆಗೆದು ಗೋಣಿಚೀಲದಲ್ಲಿಟ್ಟಿದ್ದಾರೆ ಎಂಬ ಮಾಹಿತಿ ಹರಡಿತ್ತು.

ಇದರಿಂದ ಆಕ್ರೋಶಗೊಂಡ ಆನೆಗೊಂದಿಯ ನೂರಾರು ಜನ ಜಮಾಯಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಅಭಿವೃದ್ಧಿ ಬೇಡ. ನಿಧಿಗಳ್ಳತನ ಮಾಡುವ ಉದ್ದೇಶಕ್ಕೆ ಇಂತಹ ಕೆಲಸ ಮಾಡಲಾಗುತ್ತಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಜೀರ್ಣೊದ್ಧಾರದ ನೆಪದಲ್ಲಿ ಮೂಲ ವಿಗ್ರಹ ಸ್ಥಳಾಂತರ: ಸ್ಥಳೀಯರ ಆಕ್ರೋಶ

ದೇಗುಲದಲ್ಲಿದ್ದ ಸುಮಾರು ಐನೂರಕ್ಕೂ ಹೆಚ್ಚು ವರ್ಷಗಳ ಕಾಲದ ಶ್ರೀಚಕ್ರವನ್ನು ಕಾಮಗಾರಿ ಮಾಡುತ್ತಿರುವವರು ಕಿತ್ತು ಭಗ್ನ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಇದು ವಿವಾದ ಸ್ವರೂಪ ಪಡೆಯುತ್ತಿದ್ದಂತೆಯೇ ಸ್ಥಳಕ್ಕೆ ಶಾಸಕ ಪರಣ್ಣ ಮುನವಳ್ಳಿ, ತಹಶೀಲ್ದಾರ್ ಯು. ನಾಗರಾಜ್, ಸಹಾಯಕ ಆಯುಕ್ತ ಸಿದ್ದರಾಮೇಶ್ವರ ಭೇಟಿ ನೀಡಿ ಪರಿಶೀಲಿಸಿದರು.

ಇದನ್ನೂ ಓದಿ: ವೆಲ್ಡಿಂಗ್​​ಗೆ ಬಂದು ಆಂಟಿ ಜೊತೆ ಬಾಂಡಿಂಗ್ ಶುರು ಮಾಡ್ದ.. ಮತ್ತೊಬ್ಬನ ಹಿಂದೆ ಬಿದ್ದಿದ್ದಕ್ಕೆ ಅವಳನ್ನೇ ಅಂತ್ಯ ಮಾಡಿದ!

Last Updated : May 27, 2022, 8:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.