ETV Bharat / state

ಕಂದಮ್ಮನ ಚಿಕಿತ್ಸೆಗಾಗಿ ಜಿಲ್ಲಾಧಿಕಾರಿ ಬಳಿ ಓಡೋಡಿ ಬಂದ ತಾಯಿ

author img

By

Published : Jul 30, 2020, 8:36 PM IST

ಒಂದೂವರೆ ವರ್ಷದ ಮಗು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ತೀರ ಕಡುಬಡವರಾಗಿರುವ ಕೆಂಚಮ್ಮ ಮಗುವಿನ ಚಿಕಿತ್ಸೆಗಾಗಿ ಜಿಲ್ಲಾಧಿಕಾರಿ ಬಳಿ ಮನವಿ ಮಾಡಲು ಆಗಮಿಸಿದ್ದರು. ಈ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದ ಡಿಸಿ ಚಿಕಿತ್ಸೆಯ ಭರವಸೆ ನೀಡಿದ್ದಾರೆ.

The mother came dc office for assistance of her baby treatment
ಕಂದಮ್ಮನ ಚಿಕಿತ್ಸೆಗಾಗಿ ಜಿಲ್ಲಾಧಿಕಾರಿ ಬಳಿ ಓಡೋಡಿ ಬಂದ ತಾಯಿ

ಕೊಪ್ಪಳ: ಅನಾರೋಗ್ಯದಿಂದ ಬಳಲುತ್ತಿರುವ ತನ್ನ ಮಗುವಿಗೆ ಚಿಕಿತ್ಸೆಯ ನೆರವು ನೀಡುವಂತೆ ಮಹಿಳೆಯೊಬ್ಬರು ಇಂದು ಜಿಲ್ಲಾಧಿಕಾರಿ ಬಳಿ ಮನವಿ ಮಾಡಿಕೊಂಡಿದ್ದಾರೆ. ಯಲಬುರ್ಗಾ ತಾಲೂಕಿನ ಹಿರೇಮ್ಯಾಗೇರಿ ಗ್ರಾಮದ ಶಂಕ್ರಮ್ಮ ಎಂಬ ಮಹಿಳೆ ಇಂದು ಜಿಲ್ಲಾಧಿಕಾರಿ ಕಚೇರಿಗೆ ತನ್ನ ಅನಾರೋಗ್ಯಪೀಡಿತ ಮಗುವಿನೊಂದಿಗೆ ಆಗಮಿಸಿದ್ದರು.

ಒಂದೂವರೆ ವರ್ಷದ ಮಗು ಉಸಿರಾಟದ ತೊಂದರೆಯಿಂದ ಬಳಲುತ್ತಿದೆ. ಕೂಲಿ‌ ಮಾಡಿ ಜೀವನ ಮಾಡುವ ನಾವು ಈಗಾಗಲೇ ನಮ್ಮ ಕೈಲಾದಷ್ಟು ಚಿಕಿತ್ಸೆ ಕೊಡಿಸಿದ್ದೇವೆ. ಈಗ ಚಿಕಿತ್ಸೆ ಕೊಡಿಸಲು ಆಗುತ್ತಿಲ್ಲ. ಹೀಗಾಗಿ ಮಗುವಿನ ಚಿಕಿತ್ಸೆಗೆ ನೆರವು ನೀಡುವಂತೆ ಮಹಿಳೆ ಶಂಕ್ರಮ್ಮ ಡಿಸಿ ವಿಕಾಸ್ ಕಿಶೋರ್ ಸುರಳ್ಕರ್ ಅವರಲ್ಲಿ ಮನವಿ ಮಾಡಿಕೊಂಡರು.

ಮಹಿಳೆಯ ಸಂಕಷ್ಟ ಆಲಿಸಿದ ಡಿಸಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಡಿಎಚ್ಓ ಅವರನ್ನು ಕಚೇರಿಗೆ ಕರೆಸಿಕೊಂಡು ಮಗುವಿನ ಚಿಕಿತ್ಸೆ ಕುರಿತು ಭರವಸೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.