ETV Bharat / state

ಮೊಂಡಾಗದ ಸಾಣೆ ಹಿಡಿಯುವವರ ಬದುಕು... ದಿನಕ್ಕೆ 500ರಿಂದ 600 ರೂ. ಕಮಾಯಿ!!

ಕುಷ್ಟಗಿ ತಾಲೂಕಿನ ತಾವರಗೇರಾದ ರಾಜೇಸಾಬ್ ಕಂತ್ರಾಜ್ ಮೊದಲು ಹೆಗಲ ಮೇಲೆ ಹೊತ್ತೊಯ್ದು ಸಾಣೆ ಹಿಡಿಯುತ್ತಿದ್ದವರು ಇದೀಗ ಕ್ರಮೇಣ ಟಿವಿಎಸ್ ಎಕ್ಸೆಲ್ ವಾಹನದಲ್ಲಿ ಸಾಣೆಗಾರಿಕೆಯನ್ನು ನಿರ್ವಹಿಸುವ ಮಟ್ಟಿಗೆ ಬದುಕು ಬದಲಿಸಿಕೊಂಡಿದ್ದಾರೆ.

kushtagi
ಬದುಕು ಗಟ್ಟಿಗೊಳಿಸಿದ ಸಾಣೆಗಾರಿಕೆ
author img

By

Published : Aug 23, 2020, 9:18 PM IST

ಕುಷ್ಟಗಿ(ಕೊಪ್ಪಳ): ಚಕ್ರ ತಿರುಗಿಸಿ, ಸಾಣೆ ಹಿಡಿದು ಮನೆ ಬಳಕೆಯ ಈಳಿಗೆ, ಕುಡಗೋಲು, ಕತ್ತರಿ, ಚಾಕು ಇತ್ಯಾದಿ ವಸ್ತುಗಳನ್ನು ಮೊನಚುಗೊಳಿಸಿದರೆ ಆದಾಯ ಗಿಟ್ಟಿಸುವ ಬದುಕು ಸಾಣೆ ಕಲ್ಲಿನಂತೆ ಸವೆಯುತ್ತದೆ. ಆದಾಗಿಯೂ, ತಮ್ಮ ಕಸುಬುದಾರಿಕೆ ನಿಲ್ಲಿಸಿಲ್ಲ.

ಸಾಣೆಗಾರಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿರುವ ರಾಜೇಸಾಬ್ ಕಂತ್ರಾಜ್

ಕುಷ್ಟಗಿ ತಾಲೂಕಿನ ತಾವರಗೇರಾದ ರಾಜೇಸಾಬ್ ಕಂತ್ರಾಜ್ ಕಳೆದ 15 ವರ್ಷಗಳಿಂದ ಸಾಣೆ ಹಿಡಿಯುವ ಕಾಯಕದಲ್ಲಿ ನಿರತರಾಗಿದ್ದಾರೆ. ಮೊದಲು ಹೆಗಲ ಮೇಲೆ ಹೊತ್ತೊಯ್ದು ಸಾಣೆ ಹಿಡಿಯುತ್ತಿದ್ದವರು ಇದೀಗ ಕ್ರಮೇಣ ಟಿವಿಎಸ್ ಎಕ್ಸೆಲ್ ವಾಹನದಲ್ಲಿ ಸಾಣೆಗಾರಿಕೆಯನ್ನು ನಿರ್ವಹಿಸುವ ಮಟ್ಟಿಗೆ ಬದುಕು ಬದಲಿಸಿಕೊಂಡಿದ್ದಾರೆ. ನಿತ್ಯ ಟಿವಿಎಸ್ ವಾಹನದ ಸಾಣೆ ಚಕ್ರ ಹೊತೊಯ್ದು ಸೇವೆ ನೀಡುತ್ತಿದ್ದಾರೆ. ಈ ಕಾರ್ಯ ನಿರ್ವಹಿಸಿದರೆ ದಿನಕ್ಕೆ 500 ರಿಂದ 600 ರೂ. ಆದಾಯದಲ್ಲಿ ಜೀವನ ಸಂತೃಪ್ತಿ ಅವರದ್ದಾಗಿದೆ.

ಮೂಲತಃ ಅವರ ಅಜ್ಜನಿಂದ ಬಳುವಳಿಯಾಗಿ ಬಂದ ಈ ಉದ್ಯೋಗ, ಇದೀಗ ತಾವೇ ನಿರ್ವಹಿಸಿಕೊಂಡು ಅಂತರ್​ ಜಿಲ್ಲೆಗೂ ವಿಸ್ತರಿಸಿಕೊಂಡಿದ್ದಾರೆ. ಇವರ ಕಸುಬುದಾರಿಕೆಯಿಂದ ಜನರು ನೀಡುವ ಹಣವೇ ಇವರಿಗೆ ಜೀವನಾಧಾರವಾಗಿದೆ. ಸಾಣೆ ಹಿಡಿಯಲು ಇದೀಗ 20 ರೂ ನೀಡುತ್ತಿದ್ದು, ಒಮ್ಮೊಮ್ಮೆ ದಿನವಿಡೀ ಕೆಲಸ ಸಿಕ್ಕರೆ ಒಂದೊಂದು ವೇಳೆ ಪೆಟ್ರೋಲ್ ಖರ್ಚು ಸಹ ಬರುವುದಿಲ್ಲ.

ದೈನಂದಿನ ಜೀವನದಲ್ಲಿ ಬದುಕು ಇಷ್ಟೇ ಎಂದು ಸುಮ್ಮನೇ ಕುಳಿತಿಲ್ಲ. ನಿತ್ಯ ಬದುಕಿನ ಚಕ್ರ ಉರುಳಲು, ಸಾಣೆ ಕಲ್ಲು ಜೀವ ಸವೆದಂತೆ ತಮ್ಮ ಜೀವನ ಸವೆಸಬೇಕಿದ್ದು, ಕೊರೊನಾ ಸಂಕಷ್ಟದಲ್ಲೂ ಬದುಕು ಗಟ್ಟಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.