ಕೊಪ್ಪಳ: ನಿನ್ನೆ ರಾತ್ರಿ ಜಿಲ್ಲೆಯ ಕುಷ್ಟಗಿ ಪಟ್ಟಣದ ತಾವರಗೇರಾ ರಸ್ತೆ ಬಳಿಯ ಗುಂಡಿಯೊಂದರಲ್ಲಿ ಬಿದ್ದಿದ್ದ ಹಸುವನ್ನು ರಕ್ಷಿಸಲಾಗಿದೆ.
![cow](https://etvbharatimages.akamaized.net/etvbharat/prod-images/kn-kpl-01-27-hasuraxane-visuals-7202284_27042019090040_2704f_1556335840_619.jpg)
ಕತ್ತಲೆಯಿದ್ದ ಕಾರಣ ಹಸು ಗುಂಡಿಯಲ್ಲಿ ಬಿದ್ದಿರುವುದು ಯಾರಿಗೂ ಕಂಡಿಲ್ಲ. ಬೆಳಗ್ಗಿನ ಜಾವ ಈ ದೃಶ್ಯವನ್ನು ಕಂಡಕೂಡಲೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಆನಂತರ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಠಾಣಾಧಿಕಾರಿಗಳು ಸತತ ಒಂದೂವರೆ ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಹಸುವನ್ನು ಸುರಕ್ಷಿತವಾಗಿ ಮೇಲೆತ್ತಿದರು.