ETV Bharat / state

ಅಂಜನಾದ್ರಿಗೆ ಥಾವರ್​ ಚಂದ್ ಗೆಹ್ಲೋಟ್ ಭೇಟಿ: ರಾಜ್ಯಪಾಲರ ಎದುರು ಧರಣಿಗೆ ಯತ್ನಿಸಿದ ಬಾಬಾ

ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ರಾಜ್ಯಪಾಲ ಥಾವರ್​ ಚಂದ್ ಗೆಹ್ಲೋಟ್ ಭೇಟಿ ನೀಡಿ ದೇವರು ದರ್ಶನ ಪಡೆದರು‌.

thawar chand gehlot
ಥಾವರ್​ ಚಂದ್ ಗೆಹ್ಲೋಟ್
author img

By

Published : Dec 9, 2022, 11:51 AM IST

Updated : Dec 9, 2022, 2:18 PM IST

ಗಂಗಾವತಿ: ತಾಲೂಕಿನ ಚಿಕ್ಕರಾಂಪೂರದಲ್ಲಿರುವ ಅಂಜನಾದ್ರಿ ದೇಗುಲಕ್ಕೆ ರಾಜ್ಯಪಾಲ ಥಾವರ್​ ಚಂದ್ ಗೆಹ್ಲೋಟ್ ಭೇಟಿ ನೀಡಿ ದೇವರ ದರ್ಶನ ಪಡೆದರು‌. ಈ ವೇಳೆ, ಪೂಜೆಯ ವಿವಾದಕ್ಕೆ ಸಂಬಂಧಿಸಿದಂತೆ ವಿದ್ಯಾದಾಸ್​ ಬಾಬಾ ಎಂಬುವರು ಧರಣಿಗೆ ಯತ್ನಿಸಿದ ಪ್ರಸಂಗ ಜರುಗಿತು.

ದೇಗುಲದಲ್ಲಿ ಪೂಜೆ ಸಲ್ಲಿಸಲು ನ್ಯಾಯಾಲಯ ಆದೇಶ ನೀಡಿದ್ದರೂ ಕೂಡ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ ಎಂದು ಆಕ್ಷೇಪಿಸಿದ ವಿದ್ಯಾದಾಸ್​ ಬಾಬಾ, ರಾಜ್ಯಪಾಲರ ಮುಂದೆಯೇ ಧರಣಿಗೆ ಯತ್ನಿಸಿದರು. ಈ ಸಂದರ್ಭದಲ್ಲಿ ಬಾಬಾ ಮತ್ತು ಅಧಿಕಾರಿಗಳ ಮಧ್ಯೆ ಕೆಲಕಾಲ ವಾಗ್ವಾದ ನಡೆಯಿತು. ಬಳಿಕ ಪೊಲೀಸರು ವಿದ್ಯಾದಾಸ್​ನನ್ನು ವಶಕ್ಕೆ ಪಡೆದು ಅಲ್ಲಿಂದ ಕರೆದೊಯ್ದರು.

ಅಂಜನಾದ್ರಿಯಲ್ಲಿ ರಾಜ್ಯಪಾಲರ ಎದುರು ಧರಣಿಗೆ ಯತ್ನಿಸಿದ ಬಾಬಾ

ಇದನ್ನೂ ಓದಿ: ನೂರಾರು ವಿದೇಶಿಗರಿಂದ ಅಂಜನಾದ್ರಿಯಲ್ಲಿ ಮೊಳಗಿದ ರಾಮನಾಮ

ಇದಕ್ಕೂ ಮುನ್ನ ಅಂಜನಾದ್ರಿ ದರ್ಶನಕ್ಕೆ ಆಗಮಿಸಿದ್ದ ರಾಜ್ಯಪಾಲರಿಗೆ ಜಿಲ್ಲಾಡಳಿತದಿಂದ ಕೆಂಪು ಹಾಸಿನ ಸ್ವಾಗತ ನೀಡಲಾಯಿತು. ಜೊತೆಗೆ ಶಾಸಕ ಪರಣ್ಣ ಮುನವಳ್ಳಿ ಹನುಮನ ಭಾವಚಿತ್ರ ನೀಡಿ ಸ್ವಾಗತಿಸಿದರು. ಈ ವೇಳೆ, ಜಿಲ್ಲಾಧಿಕಾರಿ ಸುಂದರೇಶ್​ ಬಾಬು, ಎಸ್​ಪಿ ಅರುಣಾಂಗ್ಶುಗಿರಿ, ಸಿಇಒ ಫೌಜಿಯಾ ತರನ್ನುಮ್ ಉಪಸ್ಥಿತರಿದ್ದರು.

Last Updated : Dec 9, 2022, 2:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.