ಕೊಪ್ಪಳ: ಜಿಲ್ಲೆಯಲ್ಲಿನ ಗವಿಮಠಕ್ಕೆ ಬರುವ ಭಕ್ತಾಧಿಗಳಿಗೆ ಪ್ರಸಾದ ರೂಪದಲ್ಲಿ ಗಿಡಗಳನ್ನು ನೀಡುವ ಪದ್ದತಿಯಿದ್ದು, ಇಂದು ವಿವಿಧ ಶಾಲೆಗಳ ಶಿಕ್ಷಕರು ಗವಿಮಠದ ಶ್ರೀಗಳಿಂದ ಸಸಿಗಳನ್ನು ಪಡೆದು ತಮ್ಮ ಶಾಲಾ ಅಂಗಳದಲ್ಲಿ ನೆಟ್ಟಿದ್ದಾರೆ.
ಲಕ್ಷ ವೃಕ್ಷೋತ್ಸವಕ್ಕಾಗಿ ಕೊಪ್ಪಳದ ಶ್ರೀ ಗವಿಮಠದಲ್ಲಿ ಬೆಳೆಸಲಾದ ಸಸಿಗಳನ್ನು ಜನರು ಈಗ ತೆಗೆದುಕೊಂಡು ಹೋಗಿ ನೆಡತೊಡಗಿದ್ದು, ಇಂದು ಸುಮಾರು 30ಕ್ಕೂ ಹೆಚ್ಚು ಶಿಕ್ಷಕರು ತಮ್ಮ ಶಾಲಾ ಅಂಗಳದಲ್ಲಿನ ಜಾಗದ ಅವಕಾಶಕ್ಕೆ ಅನುಗುಣವಾಗಿ ಸಸಿಗಳನ್ನು ನೆಡಲು ತೆಗೆದುಕೊಂಡು ಹೋಗಿದ್ದಾರೆ.
ಮಠದಿಂದ ತೆಗೆದುಕೊಂಡು ಬಂದಿರುವ ಸಸಿಗಳನ್ನು ನಮ್ಮ ನಮ್ಮ ಶಾಲಾ ಆವರಣದಲ್ಲಿ ಜಾಗದ ಲಭ್ಯತೆಯನ್ನಾಧರಿಸಿ ನೆಟ್ಟು ಪೋಷಿಸುತ್ತೇವೆ ಎಂದು ಶಿಕ್ಷಕರು ಮಾಹಿತಿ ನೀಡಿದರು.