ಗಂಗಾವತಿ(ಕೊಪ್ಪಳ): ಇಲ್ಲಿನ ನೀಲಕಂಠೇಶ್ವರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಕರ್ತವ್ಯಕ್ಕೆ ಸತತ ಗೈರು ಹಾಜರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕ್ಷೇತ್ರ ಶಿಕ್ಷಣಾಧಿಕಾರಿ ವಿಚಾರಣೆ ನಿಗದಿ ಮಾಡಿ ಆದೇಶಿಸಿದ್ದಾರೆ.
ಶಾಲೆಯ ಸಹ ಶಿಕ್ಷಕ ಬೆಟ್ಟದೀಶ್ವರ ಸೂಡಿ ಕರ್ತವ್ಯಕ್ಕೆ ಸತತ ಕಳೆದ ಐದು ತಿಂಗಳಿಂದ ಗೈರು ಹಾಜರಾಗಿದ್ದಾರೆ ಎಂಬ ವರದಿ ಈಟಿವಿ ಭಾರತದಲ್ಲಿ ಪ್ರಸಾರವಾದ ಹಿನ್ನೆಲೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಇಒ ಸೋಮಶೇಖರಗೌಡ, ಶಿಕ್ಷಕ ಒಮ್ಮೆಗೆ 45 ದಿನಗಳ ವೈದ್ಯಕೀಯ ರಜೆ ಪಡೆದುಕೊಂಡಿದ್ದಾರೆ. ಬಳಿಕ ಆಗಾಗ ಅನಧಿಕೃತ ಗೈರಾಗಿರುವುದು ಗಮನಕ್ಕೆ ಬಂದಿದ್ದು, ಈಗಾಗಲೇ ಮೂರು ನೋಟೀಸ್ ನೀಡಲಾಗಿದೆ.
ಇದೀಗ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದು, ಅವರಿಂದ ಉತ್ತರ ಬಂದ ಬಳಿಕ ವಿಚಾರಣೆ ಮಾಡಿ ಮೇಲಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದು ತಿಳಿಸಿದ್ದಾರೆ. ವಿಚಾರಣೆ ಬಾಕಿ ಇರಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಬೆಟ್ಟದೀಶ್ವರ ಅವರಿಗೆ ಬಿಇಒ ಕಚೇರಿಯಿಂದ ನೋಟೀಸ್ ಜಾರಿ ಮಾಡಲಾಗಿದೆ.
ಇದನ್ನೂ ಓದಿ: ಐದು ತಿಂಗಳಿನಿಂದ ಕರ್ತವ್ಯಕ್ಕೆ ಗೈರು ಹಾಜರಾದ ಶಿಕ್ಷಕ.. ಪಾಠ ಮಾಡದೇ ವೇತನ ಪಡೆಯೋ ಮಾಸ್ತರ್!