ETV Bharat / state

ಕೆಸರುಗದ್ದೆಯಂತಾದ ತಳವಗೇರಾ ರಸ್ತೆ: ಗ್ರಾ.ಪಂ ವಿರುದ್ಧ ಜನರ ಆಕ್ರೋಶ

author img

By

Published : Jul 27, 2020, 8:16 AM IST

ತಳವಗೇರಾ ಗ್ರಾಮದ ಹಾಲಿನ ಕೇಂದ್ರದ ಮುಂದಿನ ರಸ್ತೆ  ಕೆಸರುಗದ್ದೆಯಂತಾಗಿದ್ದರೂ ಗ್ರಾಮ ಪಂಚಾಯಿತಿ ಸರಿಪಡಿಸಲು ಮುಂದಾಗದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

Talawagera Road to Disarray
ತಳವಗೇರಾ ರಸ್ತೆ ಅವ್ಯವಸ್ಥೆ: ಜನರ ಆಕ್ರೋಶ

ಕುಷ್ಟಗಿ(ಕೊಪ್ಪಳ): ತಾಲೂಕಿನ ತಳವಗೇರಾ ಗ್ರಾಮದ ಹಾಲಿನ ಕೇಂದ್ರದ ಮುಂದಿನ ರಸ್ತೆ ಕೆಸರುಗದ್ದೆಯಂತಾಗಿದ್ದರೂ ಗ್ರಾ.ಪಂ. ಸರಿಪಡಿಸಲು ಮುಂದಾಗದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ತಳವಗೇರಾ ರಸ್ತೆ ಅವ್ಯವಸ್ಥೆ: ಜನರ ಆಕ್ರೋಶ

ಈ ರಸ್ತೆಯನ್ನು ಕೆಲ ವರ್ಷಗಳ ಹಿಂದೆ ಸಿಮೆಂಟ್ ಕಾಂಕ್ರೀಟ್ ರಸ್ತೆಯನ್ನಾಗಿ ಅಭಿವೃದ್ದಿಪಡಿಸಲಾಗಿತ್ತು. ರಸ್ತೆ ಪಕ್ಕದಲ್ಲಿ ಚರಂಡಿ ನಿರ್ಮಾಣಕ್ಕೆ ಯಾವುದೇ ಕ್ರಮ ಕೈಗೊಳ್ಳದಿರುವುದು ಈ ಅವ್ಯವಸ್ಥೆಗೆ ಕಾರಣವಾಗಿದೆ. ದಿನ ಬೆಳಗಾದರೆ ಜನ ಇದೇ ರಸ್ತೆಯಲ್ಲಿ ಕೊಚ್ಚೆ ನೀರು, ಕೆಸರು ದಾಟಿಕೊಂಡು ಹೋಗಬೇಕಿದೆ.

ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ರಸ್ತೆಯಲ್ಲಿ ನೀರು ನಿಲ್ಲದಂತೆ, ಚರಂಡಿ ಹಾಗೂ ರಸ್ತೆ ಕಾಮಗಾರಿ ಕೈಗೊಳ್ಳಬೇಕಿದೆ. ಒಂದು ವೇಳೆ, ರಸ್ತೆ ದುರಸ್ತಿ ಪಡಿಸದಿದ್ದಲ್ಲಿ ಗ್ರಾ.ಪಂ. ಚುನಾವಣೆ ಬಹಿಷ್ಕರಿಸುವ ಸೂಕ್ತ ತೀರ್ಮಾನದ ಬಗ್ಗೆ ಯೋಚಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.