ಕೊಪ್ಪಳ: ಈ ಹಿಂದೆ ಜಿಲ್ಲೆಯ ಕುಷ್ಟಗಿ ತಹಶಿಲ್ದಾರರಾಗಿದ್ದ ಕೆ.ಎಂ. ಗುರುಬಸವರಾಜ ತಮ್ಮ ಕಚೇರಿಯ ಸಹೋದ್ಯೋಗಿಗೆ ಮುತ್ತಿಟ್ಟಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಳೆದ ಎಂಟು ತಿಂಗಳ ಹಿಂದೆ ನಡೆದಿದೆ ಎನ್ನಲಾದ ಈ ಕಿಸ್ಸಿಂಗ್ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

ಈ ಹಿಂದೆ ಕುಷ್ಟಗಿ ತಹಶೀಲ್ದಾರರಾಗಿದ್ದ ಸಂದರ್ಭದಲ್ಲಿ ಕೆ.ಎಂ. ಗುರುಬಸವರಾಜ ತಮ್ಮ ಕಚೇರಿಯಲ್ಲಿಯೇ ಸಿಬ್ಬಂದಿಯೊಬ್ಬರಿಗೆ ಕಿಸ್ ಮಾಡಿದ್ದಾರೆ. ಈ ಈಗ ವಿಡಿಯೋ ವೈರಲ್ ಆಗಿದೆ.
ಸದ್ಯ ಗುರುಬಸವರಾಜು ಅವರು ಜಿಲ್ಲಾ ನಗರಾಭಿವೃದ್ಧಿ ಕೋಶದಲ್ಲಿ ತಹಶೀಲ್ದಾರರಾಗಿದ್ದಾರೆ. ಎಂಟು ತಿಂಗಳ ಹಿಂದೆ ನಡೆದ ಕಿಸ್ಸಿಂಗ್ ವಿಡಿಯೋ ವೈರಲ್ ಆಗುತ್ತಿದ್ದಂತೆ ವರ್ಗಾವಣೆಗೊಂಡಿದ್ದಾರೆ ಎನ್ನಲಾಗುತ್ತಿದೆ.