ಗಂಗಾವತಿ(ಕೊಪ್ಪಳ) : ತಮ್ಮ ಗ್ರಾಮದಿಂದ ಸುಮಾರು 40 ಕಿ.ಮೀ ದೂರವಿರುವ ಚಿಕ್ಕರಾಂಪುರ ಗ್ರಾಮದ ಅಂಜನಾದ್ರಿ ಬೆಟ್ಟದವರೆಗೆ ದೀರ್ಘದಂಡ ನಮಸ್ಕಾರ ಹಾಕುವುದಾಗಿ ಹರಕೆ ಹೊತ್ತಿದ್ದ ಸ್ವಾಮೀಜಿ ಒಬ್ಬರು, ಇದೀಗ ಹರಕೆ ತೀರಿಸುವ ಮೂಲಕ ಗಮನ ಸೆಳೆದಿದ್ದಾರೆ. ಕಾರಟಗಿ ತಾಲೂಕಿನ ಮೈಲಾಪುರ ಗ್ರಾಮದ ಅಮರಯ್ಯಸ್ವಾಮಿ ಹಿರೇಮಠ ಇದೀಗ ದೇಗುಲದವರೆಗೆ ದೀರ್ಘದಂಡ ನಮಸ್ಕಾರ ಹಾಕುತ್ತಲೇ ಬೆಟ್ಟ ಏರಿ ದಾಖಲೆ ಮಾಡಿದ್ದಾರೆ.
ತಾಲೂಕಿನ ಚಿಕ್ಕರಾಂಪೂರದಲ್ಲಿರುವ 580ಕ್ಕೂ ಹೆಚ್ಚು ಮೆಟ್ಟಿಲುಗಳ ಅಂಜನಾದ್ರಿ ಬೆಟ್ಟವನ್ನು ಬರಿಗಾಲಲ್ಲಿ ಹತ್ತುವುದೇ ಪ್ರಯಾಸದಾಯಕ ಕೆಲಸ. ಆದರೆ ಹೊತ್ತ ಹರಕೆಯಂತೆ ದೀರ್ಘದಂಡ ನಮಸ್ಕಾರ ಹಾಕುವ ಮೂಲಕ ಸ್ವಾಮೀಜಿ ಗಮನ ಸೆಳೆದಿದ್ದಾರೆ. ಜೂ.20ರಂದು ಬೆಟ್ಟ ಏರುವ ಸಂಕಲ್ಪ ಮಾಡಿದ್ದ ಸ್ವಾಮೀಜಿ, 21ರಂದು ದೀರ್ಘದಂಡ ನಮಸ್ಕಾರದ ಪ್ರಯಾಣವನ್ನು ತಮ್ಮ ಗ್ರಾಮದಿಂದ ಆರಂಭಿಸಿದ್ದಾರೆ. ದಿನಕ್ಕೆ ಎಂಟರಿಂದ ಹತ್ತು ಗಂಟೆ ಪ್ರಯಾಣ ಬೆಳೆಸಿದ ಸ್ವಾಮೀಜಿ ಐದು ದಿನದಲ್ಲಿ ಬೆಟ್ಟಕ್ಕೆ ತಲುಪಿ ಹರಕೆ ಸಲ್ಲಿಸಿದ್ದಾರೆ.
ಇದನ್ನೂ ಓದಿ : ಪರಿಷ್ಕೃತ ಪಠ್ಯ ರದ್ದುಗೊಳಿಸುವಂತೆ ಶಿಕ್ಷಣ ಸಚಿವರಿಗೆ ಪತ್ರ ಬರೆದ ಈಶ್ವರಾನಂದಪುರಿ ಸ್ವಾಮೀಜಿ