ETV Bharat / state

ಕಾಲೇಜು ಸಮಯಕ್ಕೆ ಬಸ್​ ಬಿಡಲು ಆಗ್ರಹಿಸಿ ಯಲಬುರ್ಗಾದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

ಕೆಎಸ್​ಆರ್​ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಎ. ಮುಲ್ಲಾರನ್ನು ತರಾಟೆಗೆ ತೆಗೆದುಕೊಂಡ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಬೇವೂರು ಕ್ರಾಸ್​ನಿಂದ ಕೊಪ್ಪಳಕ್ಕೆ ಬಸ್​ ವ್ಯವಸ್ಥೆ ಮಾಡಿಕೊಡಿ ಎಂದು ಆಗ್ರಹಿಸಿದರು.

students protest to provide bus
ಕಾಲೇಜು ಸಮಯಕ್ಕೆ ಬಸ್​ ಬಿಡಲು ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ
author img

By

Published : Nov 9, 2021, 1:08 PM IST

Updated : Nov 9, 2021, 1:39 PM IST

ಕೊಪ್ಪಳ: ಸೂಕ್ತ ಸಮಯಕ್ಕೆ ಬಸ್​ ಸಂಚಾರ ನಡೆಸದ ಹಿನ್ನೆಲೆ ಶಾಲಾ- ಕಾಲೇಜಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬೇವೂರು ಕ್ರಾಸ್​ನಲ್ಲಿ ಮಂಗಳವಾರ ನಡೆದಿದೆ.

ಬೇವೂರು ಕ್ರಾಸ್​ನಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು ಬಸ್​ ತಡೆದು, ಕಾಲೇಜು ಸಮಯಕ್ಕೆ ಸಮರ್ಪಕವಾಗಿ ಬಸ್​ಗಳು ಬರುತ್ತಿಲ್ಲ. ಇದರಿಂದಾಗಿ ತರಗತಿಗಳಿಗೆ ಸರಿಯಾದ ಸಮಯಕ್ಕೆ ಹಾಜರಾಗಲು ಆಗುತ್ತಿಲ್ಲ. ಪರಿಣಾಮವಾಗಿ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕೆಎಸ್​ಆರ್​ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಎ. ಮುಲ್ಲಾರನ್ನು ತರಾಟೆಗೆ ತೆಗೆದುಕೊಂಡ ವಿದ್ಯಾರ್ಥಿಗಳು, ಸರಿಯಾದ ಸಮಯಕ್ಕೆ ಬೇವೂರು ಕ್ರಾಸ್​ನಿಂದ ಕೊಪ್ಪಳಕ್ಕೆ ಬಸ್​ ವ್ಯವಸ್ಥೆ ಮಾಡಿಕೊಡಿ ಎಂದು ಆಗ್ರಹಿಸಿದರು.

ವಿದ್ಯಾರ್ಥಿಗಳ ಮನವಿ ಆಲಿಸಿದ ಎಂ.ಎ. ಮುಲ್ಲಾ ಈ ಬಗ್ಗೆ ಅಧಿಕಾರಿಗಳ ಜತೆ ಮಾತನಾಡಿ ಶೀಘ್ರವೇ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು.

Last Updated : Nov 9, 2021, 1:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.