ETV Bharat / state

ಕೂಲಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಗ್ರಾಮೀಣ ವಿದ್ಯಾರ್ಥಿಗಳು - Coronavirus update

ಶಾಲಾ - ಕಾಲೇಜುಗಳು ಆರಂಭವಾಗದ ಕಾರಣ ಕೊಪ್ಪಳ ಜಿಲ್ಲೆಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೃಷಿ ಕೂಲಿ ಕೆಲಸಗಳಲ್ಲಿ ತೊಡಗಿದ್ದಾರೆ. ಹೆಸರು ವಕ್ಕಲಿ ಸೇರಿದಂತೆ ಅನೇಕ ಕೆಲಸಗಳಿಗೆ ವಿದ್ಯಾರ್ಥಿಗಳು ತಮ್ಮ ಸ್ನೇಹಿತರೊಂದಿಗೆ ಹೋಗುತ್ತಿದ್ದಾರೆ.

Students doing  agriculture
ಕೃಷಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳು
author img

By

Published : Aug 13, 2020, 2:33 PM IST

ಕೊಪ್ಪಳ: ಕೊರೊನಾ ಸೋಂಕು ಹರಡುವಿಕೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶಾಲಾ - ಕಾಲೇಜುಗಳನ್ನು ಆರಂಭಿಸದ ಕಾರಣ ಕಲಿಯಬೇಕಾಗಿದ್ದ ಗ್ರಾಮೀಣ ಭಾಗದಲ್ಲಿನ ಮಕ್ಕಳು ಈಗ ಕೃಷಿ ಕೂಲಿ ಕಾಯಕದತ್ತ ಹೊರಳಿದ್ದಾರೆ.

ಎಲ್ಲವೂ ಸರಿಯಾಗಿದ್ದರೆ ಜೂನ್​​ನಲ್ಲಿಯೇ ಶಾಲಾ - ಕಾಲೇಜುಗಳು ಪ್ರಾರಂಭವಾಗಿ ಮಕ್ಕಳು ಕಲಿಕೆಯಲ್ಲಿ ನಿರತರಾಗಿರುತ್ತಿದ್ದರು‌. ಆದರೆ, ಕೊರೊನಾದಿಂದಾಗಿ ಜ್ಞಾನ ದೇಗುಲಗಳ ಬಾಗಿಲು ಇನ್ನೂ ಕೆಲವು ತಿಂಗಳು ತೆರೆಯುವುದೇ ಅನುಮಾನವಾಗಿದೆ.

Students doing  agriculture
ಕೂಲಿ ಕೆಲಸ ಮಾಡುತ್ತಿರುವ ವಿದ್ಯಾರ್ಥಿಗಳು

ಹೀಗಾಗಿ ಜಿಲ್ಲೆಯ ಗ್ರಾಮೀಣ ಭಾಗದ ಶಾಲಾ - ಕಾಲೇಜುಗಳ ಮಕ್ಕಳು ದುಡಿಮೆಯತ್ತ ಮುಖಮಾಡಿದ್ದಾರೆ. ಅದರಲ್ಲೂ ವಿಶೇಷವಾಗಿ ಕೃಷಿ ಚಟುವಟಿಕೆಯ ಕೂಲಿ‌ ಕೆಲಸಗಳತ್ತ ಗಮನ ಹರಿಸಿದ್ದಾರೆ. ಹೆಸರು ವಕ್ಕಲಿ ಸೇರಿದಂತೆ ಅನೇಕ ಕೆಲಸಗಳಿಗೆ ವಿದ್ಯಾರ್ಥಿಗಳು ತಮ್ಮ ಸ್ನೇಹಿತರೊಂದಿಗೆ ಹೋಗುತ್ತಿದ್ದಾರೆ.

ಕೃಷಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳು

ಶಾಲಾ-ಕಾಲೇಜುಗಳನ್ನು ತೆರೆಯದ ಕಾರಣ ಮನೆಯಲ್ಲಿ ಕುಳಿತು ಏನು ಮಾಡುವುದು ಎಂದು ಈ ಕಾರ್ಯದಲ್ಲಿ ನಿರತರಾಗಿದ್ದಾರೆ. ದಿನಕ್ಕೆ ₹ 150 ಕೂಲಿ ಹಣ ಸಿಗುತ್ತದೆ.‌ ಇದರಿಂದಾಗಿ ಮನೆಯವರಿಗೆ ನಮ್ಮಿಂದಲೂ ಸಹಾಯವಾದಂತಾಗುತ್ತದೆ. ಶಾಲಾ-ಕಾಲೇಜುಗಳು ಪ್ರಾರಂಭವಾದರೆ ಶಾಲೆಗೆ ಹೋಗುತ್ತೇವೆ. ಅಲ್ಲಿಯವರೆಗೂ ಹೊಲದ ಕೆಲಸಕ್ಕೆ ಹೋಗುತ್ತೇವೆ ಎನ್ನುತ್ತಾರೆ ವಿದ್ಯಾರ್ಥಿಗಳು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.