ETV Bharat / state

ಕೊಪ್ಪಳದ ಸ್ಟೋನ್ ‌ಕ್ರಷರ್ ಕ್ವಾರಿಯಲ್ಲಿ ಅಕ್ರಮವಾಗಿ ಕಲ್ಲು ಬ್ಲಾಸ್ಟ್: ತಪ್ಪಿದ ಭಾರಿ ಅನಾಹುತ

ಕೊಪ್ಪಳ ತಾಲೂಕಿನ ಟಣಕನಕಲ್ ಗ್ರಾಮದ ಬಳಿ ಇರುವ ಸ್ಟೋನ್ ಕ್ರಷರ್​​ನಲ್ಲಿ ಅಕ್ರಮವಾಗಿ ಕಲ್ಲು ಬ್ಲಾಸ್ಟ್ ಮಾಡುವುದನ್ನು ಸ್ಥಳೀಯ ರೈತರು ತಮ್ಮ ಮೊಬೈಲ್​​​ನಲ್ಲಿ ಸೆರೆ ಹಿಡಿಯಲು ಮುಂದಾಗಿದ್ದಾಗ, ಕೆಲ ರೈತರಿಗೆ ಕಲ್ಲುಗಳು ತಗುಲಿವೆ. ಅಲ್ಲದೇ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರಿಗೆ ಕಲ್ಲುಗಳು ಬಂದು ಬಡಿದಿವೆ ಎನ್ನಲಾಗಿದೆ.

stone blast crusher quarry in koppal
ಸ್ಟೋನ್ ‌ಕ್ರಷರ್ ಕ್ವಾರಿಯಲ್ಲಿ ಅಕ್ರಮವಾಗಿ ಕಲ್ಲು ಬ್ಲಾಸ್ಟ್
author img

By

Published : Jan 12, 2022, 12:52 PM IST

ಕೊಪ್ಪಳ: ಸ್ಟೋನ್ ‌ಕ್ರಷರ್ ಕ್ವಾರಿಯಲ್ಲಿ ಅಕ್ರಮವಾಗಿ ಕಲ್ಲು ಬ್ಲಾಸ್ಟ್ ಮಾಡಲಾಗಿದ್ದು, ಭಾರಿ ಅನಾಹುತ ತಪ್ಪಿದೆ. ಕೊಪ್ಪಳ ತಾಲೂಕಿನ ಟಣಕನಕಲ್ ಗ್ರಾಮದ ಬಳಿ ಇರುವ ಸ್ಟೋನ್ ಕ್ರಷರ್​​ನಲ್ಲಿ ನಿನ್ನೆ(ಮಂಗಳವಾರ) ಸಂಜೆ ಈ ಘಟನೆ ನಡೆದಿದೆ.

ಸ್ಟೋನ್ ‌ಕ್ರಷರ್ ಕ್ವಾರಿಯಲ್ಲಿ ಅಕ್ರಮವಾಗಿ ಕಲ್ಲು ಬ್ಲಾಸ್ಟ್

ಬ್ಲಾಸ್ಟ್ ಮಾಡುವುದನ್ನು ಸ್ಥಳೀಯ ರೈತರು ತಮ್ಮ ಮೊಬೈಲ್​​​ನಲ್ಲಿ ಸೆರೆ ಹಿಡಿಯಲು ಮುಂದಾಗಿದ್ದಾಗ, ಕೆಲ ರೈತರಿಗೆ ಕಲ್ಲುಗಳು ತಗುಲಿವೆ. ಅಲ್ಲದೇ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರಿಗೆ ಕಲ್ಲುಗಳು ಬಂದು ಬಡಿದಿವೆ ಎನ್ನಲಾಗಿದೆ.

ಅಕ್ಕ ಪಕ್ಕದ ರೈತರು ಕಲ್ಲು ಬ್ಲಾಸ್ಟ್ ಮಾಡುವುದನ್ನು ವಿರೋಧಿಸಿದರೂ ಬ್ಲಾಸ್ಟ್ ಮಾಡಲಾಗಿದೆ. ಅಕ್ರಮವಾಗಿ ಕಲ್ಲು ಕ್ವಾರಿಯಲ್ಲಿ ಬ್ಲಾಸ್ಟ್ ಮಾಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಇಂದು (ಬುಧವಾರ) ಬೆಳಗ್ಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು‌.

ಬಿಜೆಪಿ ಮುಖಂಡ ಡಿ. ಮಲ್ಲಣ್ಣ ಎಂಬುವವರಿಗೆ ಸೇರಿದ (ಗಂಗಾ) ಸ್ಟೋನ್ ಕ್ರಶರ್ ಇದಾಗಿದ್ದು, ತಹಶೀಲ್ದಾರ್​ ಅಮರೇಶ ಬಿರಾದಾರ, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಸ್ಥಳೀಯ ರೈತರಿಂದ ಮಾಹಿತಿ ಪಡೆದಿದ್ದಾರೆ.

ಇದನ್ನೂ ಓದಿ: ಇಂಡಿಯಲ್ಲಿ ಮದ್ಯ ಸೇವನೆಗೆ ಕರೆದು ಯುವಕನ ಕೊಲೆ.. ಪ್ರೇಯಸಿಯ ಸಹೋದರನಿಂದಲೇ ಕೃತ್ಯ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.