ETV Bharat / state

2021ಕ್ಕೆ ವಿದಾಯ: ಕುಷ್ಟಗಿ ಸರ್ಕಾರಿ ಶಾಲಾ ಮಕ್ಕಳಿಗೆ ಹಬ್ಬದ ಊಟ - ಕುಷ್ಟಗಿ ತಾಲೂಕಿನ ನೀರಲೂಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ಹೊಸ ವರ್ಷ ಹರುಷದಿಂದ ಕೂಡಿರಲಿ. ಮಕ್ಕಳು ಬರುವ ವರ್ಷವನ್ನು ಸಿಹಿಯೊಂದಿಗೆ ಸ್ವಾಗತಿಸಿಕೊಳ್ಳಲಿ ಎನ್ನುವ ಉದ್ದೇಶದಿಂದ ಕುಷ್ಟಗಿ ತಾಲೂಕಿನ ನೀರಲೂಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್​ಡಿಎಂಸಿ ಅಧ್ಯಕ್ಷ ಖಾಜಾಸಾಬ್ ಪಿಂಜಾರ ಅವರು, ಶುಕ್ರವಾರ ಶಾಲಾ ಮಕ್ಕಳಿಗೆ ಸ್ವಂತ ಖರ್ಚಿನಿಂದ ಹಬ್ಬದ ಔತಣ ನೀಡಿದ್ದಾರೆ.

special meals for Kushtagi govt school childrens
ಕುಷ್ಟಗಿ ಸರ್ಕಾರಿ ಶಾಲಾ ಮಕ್ಕಳಿಗೆ ಹಬ್ಬದ ಊಟ
author img

By

Published : Jan 1, 2022, 11:37 AM IST

ಕುಷ್ಟಗಿ: 2021ಕ್ಕೆ ವಿದಾಯ ಹೇಳಿ ಬರಲಿರುವ ಹೊಸ ವರ್ಷ ಹರುಷದಿಂದ ಕೂಡಿರಲಿ, ಮಕ್ಕಳು ಬರುವ ವರ್ಷವನ್ನು ಸಿಹಿಯೊಂದಿಗೆ ಸ್ವಾಗತಿಸಿಕೊಳ್ಳಲಿ ಎನ್ನುವ ಉದ್ದೇಶದಿಂದ ತಾಲೂಕಿನ ನೀರಲೂಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಬಿಸಿ ಊಟದ ವೇಳೆ ಕರಿಗಡಬು, ಹಪ್ಪಳ, ಸಂಡಿಗೆ ಸಹಿತ ವಿಶೇಷ ಹಬ್ಬದ ಊಟ ಬಡಿಸಲಾಗಿದೆ.

ಕುಷ್ಟಗಿ ಸರ್ಕಾರಿ ಶಾಲಾ ಮಕ್ಕಳಿಗೆ ಹಬ್ಬದ ಊಟ

ಶಾಲೆಯ ಎಸ್​ಡಿಎಂಸಿ ಅಧ್ಯಕ್ಷ ಖಾಜಾಸಾಬ್ ಪಿಂಜಾರ ಅವರು, ಶುಕ್ರವಾರ ಶಾಲಾ ಮಕ್ಕಳಿಗೆ ಸ್ವಂತ ಖರ್ಚಿನಿಂದ ಹಬ್ಬದ ಔತಣ ನೀಡಿ ಅರ್ಥಪೂರ್ಣ ಕಾರ್ಯ ಮಾಡಿದ್ದಾರೆ. 1ರಿಂದ 7ನೇ ತರಗತಿಯ 176 ಮಕ್ಕಳು ಮಧ್ಯಾಹ್ನದ ಊಟವಾಗಿ ಬೆಲ್ಲ, ಕಡಲೆ ಬೇಳೆಯ ಹೂರಣದ ಕರಿಗಡಬು, ಹಪ್ಪಳ, ಸಂಡಿಗೆ, ಕಟ್ಟಿನ ಸಾರು ಉಂಡು ಬಾಯಿ ಚಪ್ಪರಿಸಿ ವಿದಾಯದ ವರ್ಷ ಹಾಗೂ ಸ್ವಾಗತಿಸುವ ಹೊಸ ವರ್ಷವನ್ನು ಸ್ಮರಣೀವಾಗಿಸಿದರು. ಕರಿಗಡುಬಿನ ಜೊತೆಗೆ ತುಪ್ಪವನ್ನು ಮಕ್ಕಳಿಗೆ ಊಣ ಬಡಿಸಲಾಯಿತು.

ಈ ಕುರಿತು ಮಾತನಾಡಿದ ಖಾಜಾಸಾಬ್ ಪಿಂಜಾರ, ಮಕ್ಕಳಿಗೆ ಸಿಹಿ ಊಟ ನೀಡಿದರೆ ಮಕ್ಕಳು ಲವಲವಿಕೆಯಿಂದ ಶಾಲೆಗೆ ಬರುತ್ತಾರೆ. ಅಲ್ಲದೇ ಮಕ್ಕಳಿಗೆ ಬರಲಿರುವ ಹೊಸ ವರ್ಷ ಅವರ ಬಾಳಲ್ಲಿ ಸಿಹಿಯಾಗಿರಲಿ ಎನ್ನುವ ಸದುದ್ದೇಶದ ಹಿನ್ನೆಲೆಯಲ್ಲಿ ಈ ವಿಶೇಷ ಹಬ್ಬದ ಅಡುಗೆ ತಯಾರಿಸಿರುವುದಾಗಿ ಹೇಳಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.