ETV Bharat / state

ಪಿಎಫ್​ಐ ಮುಖಂಡರ ಮನೆಯ ಮೇಲೆ ಎಸ್​ಪಿ ನೇತೃತ್ವದಲ್ಲಿ ದಾಳಿ: ಇಬ್ಬರು ವಶಕ್ಕೆ - police attack on pfi leaders of karnataka news

ಪಿಎಫ್​ಐ ಮುಖಂಡರ ಮನೆಯ ಮೇಲೆ ಎಸ್​ಪಿ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿದ್ದು, ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಇಬ್ಬರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಎಸ್​ಪಿ ನೇತೃತ್ವದ ಪೊಲೀಸರ ತಂಡದಿಂದ ದಾಳಿ
ಎಸ್​ಪಿ ನೇತೃತ್ವದ ಪೊಲೀಸರ ತಂಡದಿಂದ ದಾಳಿ
author img

By

Published : Sep 27, 2022, 1:27 PM IST

ಗಂಗಾವತಿ (ಕೊಪ್ಪಳ): ಕಾನೂನು ಸುವ್ಯವಸ್ಥೆಗೆ ಭಂಗ, ಶಾಂತಿ ಕದಡುತ್ತಿರುವ ಆರೋಪದ ಮೇರೆಗೆ ರಾಜ್ಯದಾದ್ಯಂತ ಪಿಎಫ್​ಐ ಹಾಗೂ ಎಸ್​ಡಿಪಿಐ ಸಂಘಟನೆ ಮುಖಂಡರ ಮನೆಯ ಮೇಲೆ ಪೊಲೀಸರು ದಾಳಿ ನಡೆಸುತ್ತಿದ್ದಾರೆ. ಗಂಗಾವತಿಯಲ್ಲೂ ಕೊಪ್ಪಳ ಜಿಲ್ಲಾ ಎಸ್ಪಿ ಅರುಣಂಗ್ಶು ಗಿರಿ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, ಮೂವರು ಯುವಕರನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಪೈಕಿ ಒಬ್ಬನನ್ನು ಬಿಟ್ಟು ಕಳುಹಿಸಲಾಗಿದ್ದು, ಇಬ್ಬರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಪಿಎಫ್​ಐ ಸಂಘಟನೆ ರಾಜ್ಯ ಪ್ರಧಾನ‌ ಕಾರ್ಯದರ್ಶಿ ಸೈಯದ್ ಸರ್ಪರಾಜ್ ಹುಸೇನ್ ಮತ್ತು ಕೊಪ್ಪಳ ಜಿಲ್ಲಾ ಮುಖ್ಯ ಸಂಚಾಲಕ ರಸೂಲ್ ಮೊಹಮ್ಮದ್ ಎಂಬ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಎಸ್ಪಿ ಅಧಿಕೃತ ಮಾಹಿತಿ ನೀಡಿದ್ದಾರೆ.

ನಾಲ್ಕೈದು ದಿನದ ಹಿಂದೆಯಷ್ಟೇ ಪಿಎಫ್​‌ಐ ಜಿಲ್ಲಾಧ್ಯಕ್ಷನನ್ನು ಬಂಧಿಸಲಾಗಿತ್ತು. ಇದರ ಬೆನ್ನಲ್ಲೇ ಮಂಗಳವಾರ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೋಮವಾರ ಶಂಕಿತ ಆರೋಪಿಯೊಂದಿಗೆ ಸಂಭಾಷಣೆ ನಡೆಸಿರುವ ಸಂಶಯದ ಆಧಾರದಲ್ಲಿ ಗಂಗಾವತಿ ನಗರ ನಿವಾಸಿ ಶಬ್ಬೀರ್ ಎಂಬಾತನನ್ನು ಶಿವಮೊಗ್ಗ ಪೊಲೀಸರು ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ: ಶಂಕಿತ ಉಗ್ರನ ಜೊತೆ ಸಂಪರ್ಕ ಶಂಕೆ: ಗಂಗಾವತಿಯ ವ್ಯಾಪಾರಿಯನ್ನು ವಾಪಸ್ ಕಳುಹಿಸಿದ ಶಿವಮೊಗ್ಗ ಪೊಲೀಸರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.