ಗಂಗಾವತಿ: ಕಸ ಸಂಗ್ರಹಿಸುವ ವಾಹನಕ್ಕೆ ಆ್ಯಂಬುಲೆನ್ಸ್ ಸೈರನ್ ಅಳವಡಿಸಿ ಯಡವಟ್ಟು ಮಾಡಿ ಜನರಿಗೆ ಆತಂಕ ಸೃಷ್ಟಿಸಿದ್ದ ನಗರಸಭೆ ಕೊನೆಗೆ ಎಚ್ಚೆತ್ತು ಸೈರನ್ ಬದಲಿಸಿದೆ.
ಈ ಬಗ್ಗೆ ಈಟಿವಿ ಭಾರತದಲ್ಲಿ ಸುದ್ದಿ ಪ್ರಸಾರವಾದ ಹಿನ್ನೆಲೆ ತಕ್ಷಣ ಕಸ ಸಂಗ್ರಹ ಕಾರ್ಯದಿಂದ ಎಲ್ಲಾ ವಾಹನಗಳನ್ನು ವಾಪಸ್ ನಗರಸಭೆಗೆ ಕರೆಯಿಸಿಕೊಂಡ ಅಧಿಕಾರಿಗಳು, ತಕ್ಷಣ ವಾಹನದಲ್ಲಿನ ಅಳವಡಿಸಿದ್ದ ಸೈರನ್ ಬದಲಿಗೆ ಬೇರೆ ಹಾಡುಗಳುಳ್ಳ ಪೆನ್ಡ್ರೈವ್ ನೀಡಿದ್ದಾರೆ.
ಹೀಗಾಗಿ ಶುಕ್ರವಾರದಿಂದ ಯಥಾವತ್ತಾಗಿ ಕಸ ಸಂಗ್ರಹಿಸುವ ವಾಹನಗಳು ಪರಿಸರ ಜಾಗೃತಿ, ಒಣ ಹಾಗೂ ಹಸಿ ಕಸಗಳ ವಿಲೇವಾರಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.