ETV Bharat / state

VIDEO: ಮೊದಲ ಬಾರಿ ಬ್ರಾಹ್ಮಿ ಮುಹೂರ್ತದಲ್ಲಿ ನಡೆದ ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವ! - ಕೊರೊನಾ ನಿಯಮದನುಸಾರ ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವ

ಇದೇ ಮೊದಲ ಬಾರಿಗೆ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವ ಅತ್ಯಂತ ಸರಳವಾಗಿ ನಡೆಯಿತು.

Shri Gavisiddeshwara fair celebration in Koppal, Shri Gavisiddeshwara fair, Shri Gavisiddeshwara fair celebration under corona rules, Shri Gavisiddeshwara fair news, ಬ್ರಾಹ್ಮಿ ಮುಹೂರ್ತದಲ್ಲಿ ನಡೆದ ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವ, ಕೊಪ್ಪಳದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ನಡೆದ ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವ, ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವ, ಕೊರೊನಾ ನಿಯಮದನುಸಾರ ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವ, ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವ ಸುದ್ದಿ,
ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವ
author img

By

Published : Jan 19, 2022, 8:16 AM IST

Updated : Jan 19, 2022, 11:38 AM IST

ಕೊಪ್ಪಳ: ಜಿಲ್ಲೆಯ ಪ್ರಸಿದ್ಧ ಶ್ರೀ ಗವಿಸಿದ್ದೇಶ್ವರ​ ಮಹಾರಥೋತ್ಸವ ಇದೇ ಮೊದಲ ಬಾರಿಗೆ ಬ್ರಾಹ್ಮಿ ಮಹೂರ್ತದಲ್ಲಿ ಜರುಗಿದೆ. ಕೊರೊನಾ ಸೋಂಕಿನ ಭೀತಿ ಹಿನ್ನೆಲೆ ಇಂದು ಬೆಳಗಿನ ಜಾವ 4.30 ಕ್ಕೆ ಬ್ರಾಹ್ಮಿ ಮುಹೂರ್ತದಲ್ಲಿ ಅತ್ಯಂತ ಸರಳವಾಗಿ ರಥೋತ್ಸವ ನಡೆದಿದೆ.

ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವ

ಕೊರೊನ 3ನೇ ಅಲೆ ಹಿನ್ನೆಲೆ ಸರ್ಕಾರ ಜಾತ್ರೆಗಳಿಗೆ ನಿರ್ಬಂಧ ‌ವಿಧಿಸಿದೆ. ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವಕ್ಕೆ ಸುಮಾರು 4 ರಿಂದ 5 ಲಕ್ಷ ಜನರು ಸೇರುತ್ತಿದ್ದರು. ಪ್ರತಿ ವರ್ಷವೂ ಸಂಜೆಯ ವೇಳೆ ಮಹಾರಥೋತ್ಸವ ಜರುಗುತ್ತಿತ್ತು‌. ಆದರೆ, ಈ ಬಾರಿ ಕೊರೊನಾ ಸೋಂಕಿನ ಭೀತಿ ಹಿನ್ನೆಲೆ ಅಧಿಕ ಸಂಖ್ಯೆಯಲ್ಲಿ ಭಕ್ತರು ಸೇರಬಾರದು ಎಂಬ ಉದ್ದೇಶದಿಂದ ಈ ಬಾರಿ ರಥೋತ್ಸವದ ಸಮಯವನ್ನು ಕೊನೆ ಕ್ಷಣದವರೆಗೂ ಶ್ರೀ ಗವಿಮಠ ಅತ್ಯಂತ ಗುಪ್ತವಾಗಿಟ್ಟು ಮಹಾರಥೋತ್ಸವ ನಡೆಸಿದೆ.

ಓದಿ: ಸೂರತ್​​ನಲ್ಲಿ ಖಾಸಗಿ ಐಷಾರಾಮಿ ಬಸ್​ಗೆ ಬೆಂಕಿ, ಮಹಿಳೆ ಸಾವು: ಪಾಲ್ಘರ್​ನಲ್ಲಿ ಎರಡು ಗ್ಯಾರೇಜ್ ಭಸ್ಮ

ಈ ವೇಳೆ ಕೆಲವೇ ಭಕ್ತರು ರಥವನ್ನು ಎಳೆದರು. ಆದರೂ ಸಹ ಸಾವಿರಾರು ಜನರು ರಥೋತ್ಸವಕ್ಕೆ ಆಗಮಿಸಿದ್ದರು. ಜಿಲ್ಲಾಡಳಿತ ನಿರ್ಬಂಧದ ಹಿನ್ನೆಲೆಯಲ್ಲಿ ಜಾತ್ರೆಯ ಎಲ್ಲ ಕಾರ್ಯಕ್ರಮಗಳನ್ನು ಈ ಬಾರಿ ರದ್ದು ಮಾಡಲಾಗಿದೆ. ಸಂಪ್ರದಾಯ ಮುರಿಯದಂತೆ ಶ್ರೀಮಠದಲ್ಲಿ ಧಾರ್ಮಿಕ ಕಾರ್ಯಗಳಿಗೆ ಅವಕಾಶ ನೀಡಲಾಗಿದೆ.

Last Updated : Jan 19, 2022, 11:38 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.