ಕೊಪ್ಪಳ: ನಗರದ ರೈಲ್ವೆ ನಿಲ್ದಾಣದಿಂದ 1454 ಕಾರ್ಮಿಕರನ್ನು ಹೊತ್ತು ಒಡಿಶಾಗೆ ಪ್ರಯಾಣ ಬೆಳೆಸಿದ ಶ್ರಮಿಕ್ ರೈಲಿಗೆ ಸಂಸದ ಸಂಗಣ್ಣ ಕರಡಿ ಹಾಗೂ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್ ಅವರು ಹಸಿರು ನಿಶಾನೆ ತೋರಿಸಿದರು. ಅಲ್ಲದೆ, ಸ್ಥಳದಲ್ಲಿದ್ದ ಇತರೆ ಅಧಿಕಾರಿಗಳು, ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಕಾರ್ಮಿಕರನ್ನು ಬೀಳ್ಕೊಟ್ಟರು.
ನಿನ್ನೆ ರಾತ್ರಿ ಕೊಪ್ಪಳ ನಗರದ ರೈಲ್ವೆ ನಿಲ್ದಾಣದಿಂದ ಹೊರಟ 24 ಬೋಗಿಗಳ ಶ್ರಮಿಕ್ ರೈಲು ಮೇ. 31 ರಂದು ಒಡಿಶಾ ರಾಜ್ಯವನ್ನು ತಲುಪಲಿದೆ. ತಮ್ಮ ರಾಜ್ಯಕ್ಕೆ ಹೊರಟ ಕಾರ್ಮಿಕರಿಗೆ ಜಿಲ್ಲಾಡಳಿತ ಆಹಾರದ ಪೊಟ್ಟಣ ವಿತರಿಸಿ ಬೀಳ್ಕೊಟ್ಟಿದೆ.
24 ಬೋಗಿಗಳ ಶ್ರಮಿಕ್ ರೈಲಿನಲ್ಲಿ ಕೊಪ್ಪಳ ಜಿಲ್ಲೆಯಿಂದ 880, ರಾಯಚೂರು ಜಿಲ್ಲೆಯಿಂದ 248, ಚಿತ್ರದುರ್ಗ ಜಿಲ್ಲೆಯಿಂದ 138 ಹಾಗೂ ಬಳ್ಳಾರಿ ಜಿಲ್ಲೆಯಿಂದ 149 ಕಾರ್ಮಿಕರು ಸೇರಿ ಶ್ರಮಿಕ್ ರೈಲಿನಲ್ಲಿ ಒಟ್ಟು 1454 ಕಾರ್ಮಿಕರು ಪ್ರಯಾಣ ಬೆಳೆಸಿದರು.