ಕೊಪ್ಪಳ: ತುಂಗಭದ್ರಾ ಎಡದಂಡೆ ನಾಲೆಗೆ ನೀರು ಹರಿಸುವ ಸಂಬಂಧ ಸೋಮವಾರ ಬಂದ್ಗೆ ಕರೆ ನೀಡಿರುವ ಮಾಜಿ ಸಚಿವ ಶಿವರಾಜ್ ತಂಗಡಗಿ, ಕಾರಟಗಿ ಬಂದ್ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸಿದರು.
ಪ್ರತಿಯೊಬ್ಬ ಮುಖಂಡರು, ಕಾರ್ಯಕರ್ತರು ತಲಾ ಹತ್ತರಿಂದ 20 ಜನರನ್ನು ಕರೆತರುವುದಾದರೆ ಮಾತ್ರ ನಾನು ಮುಂದುವರೆಯುತ್ತೇನೆ. ಇಲ್ಲವಾದಲ್ಲಿ ಹಿಂದಕ್ಕೆ ಸರಿಯುತ್ತೇನೆ. ಜನರು ಬಂದರೆ ಮೆರವಣಿಗೆ ಮಾಡಿ,ಅಧಿಕಾರಿಗಳನ್ನು ಕರೆಸಿ ಮನವಿ ನೀಡೋಣ. ಬಳಿಕ ಒಂದು ವಾರದ ಗಡುವು ನೀಡೋಣ. ವಾರದ ಬಳಿಕ ಮತ್ತೊಂದು ರೂಪುರೇಷೆ ಮಾಡೋಣ.
ಎಲ್ಲರೂ ಬರುತ್ತೇವೆ. ತಲಾ ಇಪ್ಪತ್ತು ಜನರನ್ನು ಕರೆತರುತ್ತೇವೆ ಎಂದು ಬೆಂಬಲ ಸೂಚಿಸಿದರೆ ಮಾತ್ರ ಬಂದ್ ಮಾಡೋಣ. ಯಾರು ಬೆಂಬಲ ಸೂಚಿಸುತ್ತೀರಿ ಕೈ ಎತ್ತಿ ಎಂದು ಮಾಜಿ ಸಚಿವ ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸಿದರು.