ETV Bharat / state

ದಲಿತರು ಹೊಟ್ಟೆ ಪಾಡಿಗೆ ಬಿಜೆಪಿಯಲ್ಲಿದ್ದಾರೆ ಎಂಬುದು ಸತ್ಯ: ಮಾಜಿ ಸಚಿವ ಶಿವರಾಜ ತಂಗಡಗಿ

ಸಿಎಂ ಬಸವರಾಜ ಬೊಮ್ಮಾಯಿ ಅವರು ಇದೇ ಜನವರಿಯಲ್ಲಿ ರಾಜೀನಾಮೆ ನೀಡುತ್ತಾರೆ. ನಮಗೆ ಇರುವ ಮಾಹಿತಿಯಂತೆ ಬಿಟ್ ಕಾಯಿನ್ (Bitcoin) ವಿಚಾರದಲ್ಲಿಯೇ ಅವರು ರಾಜೀನಾಮೆ ನೀಡುತ್ತಾರೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

shivaraja-thangadagi
ಮಾಜಿ ಸಚಿವ ಶಿವರಾಜ ತಂಗಡಗಿ
author img

By

Published : Nov 10, 2021, 7:54 PM IST

ಕೊಪ್ಪಳ: ದಲಿತರು ಹೊಟ್ಟೆ ಪಾಡಿಗೆ ಬಿಜೆಪಿಯಲ್ಲಿ ಇದ್ದಾರೆ ಎಂಬುದು ಸತ್ಯ. ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದು ಮಾಜಿ ಸಚಿವ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ (District Congress President Shivaraja Thangadagi) ಹೇಳಿದ್ದಾರೆ.

ಕೊಪ್ಪಳದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯಲ್ಲಿರುವ ದಲಿತರು ಹೊಟ್ಟೆ ಪಾಡಿಗಾಗಿಯೇ ಇದ್ದಾರೆ. ರಮೇಶ ಜಿಗಜಿಣಗಿ, ಗೋವಿಂದ ಕಾರಜೋಳ, ಚಲುವಾದಿ ನಾರಾಯಣಸ್ವಾಮಿಗೆ‌ ಸಿದ್ದರಾಮಯ್ಯ ಅವರು ನೇರವಾಗಿ ಹೇಳಿದ್ದಾರೆ. ಇವರು ಹೊಟ್ಟೆ ಪಾಡಿಗಾಗಿಯೇ ಬಿಜೆಪಿಯಲ್ಲಿ ಇರುವುದು ಸತ್ಯ ಎಂದರು.

ಪುರಿ ಜಗನ್ನಾಥ ದೇವಸ್ಥಾನದಲ್ಲಿ ರಾಷ್ಟ್ರಪತಿಯನ್ನೇ ಒಳಗೆ ಬಿಟ್ಟುಕೊಂಡಿಲ್ಲ. ಬಿಜೆಪಿ ನಾಯಕರು ಸಂವಿಧಾನ ಬದಲಾಯಿಸುತ್ತೇವೆ ಅಂತಾ ಹೇಳುತ್ತಿದ್ದಾರೆ. ಇದರ ಬಗ್ಗೆ ಬಿಜೆಪಿ ಎಸ್ಸಿ ಮೋರ್ಚಾ ಮೊದಲು ಹೋರಾಟ ಮಾಡಲಿ ಎಂದು ಹೇಳಿದರು.

ಬಿಟ್ ಕಾಯಿನ್ ಹಗರಣದಲ್ಲಿ ಬಿಜೆಪಿಯ ಸಾಕಷ್ಟು ನಾಯಕರಿದ್ದಾರೆ. ಈ ವಿಷಯ ಡೈವರ್ಟ್ ಮಾಡಲು ಬಿಜೆಪಿ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ಮಾಡುತ್ತಿದೆ. ಬಿಜೆಪಿ‌ ಎಸ್ಸಿ ಮೋರ್ಚಾಕ್ಕೆ ನಾವು ಎಚ್ಚರಿಕೆ ನೀಡುತ್ತೇವೆ. ನೀವು ಸಿದ್ದರಾಮಯ್ಯ ವಿರುದ್ಧ ಹಗುರವಾಗಿ ಮಾತನಾಡಿದರೆ ಸರಿ ಇರುವುದಿಲ್ಲ. ಸಿದ್ದರಾಮಯ್ಯ ಜಾರಿ ಮಾಡಿರುವ ಎಸ್ಸಿಪಿಟಿಎಸ್ಪಿ ಸರಿಯಾಗಿ ಜಾರಿ ಮಾಡಲಿ. ಕೇಂದ್ರ ಸರ್ಕಾರವೂ ಎಸ್ಸಿ/ಎಸ್ಟಿ ಗುತ್ತೆಗೆದಾರರಿಗೆ ಕೆಲಸ ನೀಡಲಿ ಎಂದು ಒತ್ತಾಯಿಸಿದರು.

ಸಿಎಂ ಬಸವರಾಜ ಬೊಮ್ಮಾಯಿ ಅವರು ಇದೇ ಜನವರಿಯಲ್ಲಿ ರಾಜೀನಾಮೆ ನೀಡುತ್ತಾರೆ. ನಮಗೆ ಇರುವ ಮಾಹಿತಿಯಂತೆ ಬಿಟ್ ಕಾಯಿನ್ ವಿಚಾರದಲ್ಲಿಯೇ ಬೊಮ್ಮಾಯಿ ರಾಜೀನಾಮೆ ನೀಡುತ್ತಾರೆ ಎಂದರು.

ಕಳೆದ 2016-17ರಲ್ಲೇ ಬಿಟ್ ಕಾಯಿನ್ ಹಗರಣ ಬಯಲಿಗೆ ಬಂದಿದೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ಮಾಹಿತಿ ಇಲ್ಲ. ಅವರು ಹಿಂದೆ ಏಕೆ ಬಾಯಿಗೆ ಬೆಲ್ಲ ಇಟ್ಟುಕೊಂಡು ಕೂತಿದ್ದರು? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ನೆನೆಗುದಿಗೆ ಬಿದ್ದಿರುವ ರಾಜ್ಯದ ಎಂಟು ರೈಲ್ವೆ ಯೋಜನೆಗೆ ಕಾಯಕಲ್ಪ: ಸಚಿವ ವಿ. ಸೋಮಣ್ಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.